ಬೆಂಗಳೂರು: ಮೈಸೂರು ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ದೂರುದಾರ ಸ್ನೇಹಮಯಿ ಕೃಷ್ಣ ಮಾಡಿರುವ ಆರೋಪ ಕುರಿತು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಕಿಡಿಕಾರಿದ್ದಾರೆ.
ಈ ಬಗ್ಗೆ ಮಾತನಾಡಿದ ಸಚಿವ ಭೈರತಿ ಸುರೇಶ್ ಅವರು, ದಾಖಲೆ ತಿದ್ದುವ ನೀಚ ಕೆಲಸಕ್ಕೆ ನಾವು ಯಾರೂ ಇಳಿದಿಲ್ಲ. ದಾಖಲೆ ತಿದ್ದುವ ಪರಿಸ್ಥಿತಿ ನಮಗೆ ಇನ್ನೂ ಬಂದಿಲ್ಲ. ಪ್ರಕರಣ ಸಂಬಂಧ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅಲ್ಲಿ ಬೇರೆ ಏನೋ ಆಗಿದೆ ಅನ್ನೋದು ಅಲ್ಲ, ಏನೂ ಮಿಸ್ಟೇಕ್ ಆಗಲ್ವೇ ಎಂದರು.
ಜಮೀನಿಗೆ ಪರಿಹಾರ ನೀಡಿಲ್ಲ. ಅಷ್ಟೇ ವಿಸ್ತೀರ್ಣದ ಜಮೀನು ಅಂತಾ ಹೇಳಿದ್ದಾರೆ. ಅಲ್ಲಿ ವರ್ಷ ಮಿಸ್ಟೇಕ್ ಆಗಿರಬಹುದು. ಇಲ್ಲವೇ ಸಮಾನಂತರ ಬಡಾವಣೆಯಲ್ಲಿ ನೀಡುವಂತೆ ಕೋರುತ್ತೇನೆ. ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ವಿಜಯನಗರ ಲೇಔಟ್ ಅಂತಾ ಎಲ್ಲಿ ಬರೆದಿದ್ದಾರೆ. ಸಮಾನಂತರ ಜಾಗ ಅಂತಾ ಬರೆದಿದ್ದಾರೆ. ಎಲ್ಲವನ್ನೂ ನೋಡಿ ಹೇಳಿಕೆ ನೀಡಬೇಕು ಎಂದು ತಿಳಿಸಿದರು.