Mysore
31
overcast clouds

Social Media

ಸೋಮವಾರ, 10 ಆಗಸ್ಟ್ 2026
Light
Dark

ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ನನ್ನ ಸ್ಪರ್ಧೆ ಖಚಿತ ಎಂದ ಶಾಸಕ ಯತ್ನಾಳ್‌

ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ನಾನು ಸಿದ್ಧನಿದ್ದೇನೆ. ನನ್ನ ಸ್ಪರ್ಧೆ ಖಚಿತ, ನಾನೇ ಗೆಲುವು ಕೂಡ ಖಚಿತ ಎಂದು ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದ್ದಾರೆ.

ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಅವರು, ಬಿಜೆಪಿ ನಿಷ್ಠಾವಂತರ ಗುಂಪಿನ ಕೋರ್‌ ಕಮಿಟಿಯಲ್ಲಿ ನನ್ನ ಹೆಸರು ಅಂತಿಮವಾದರೆ ಸ್ಪರ್ಧಿಸುವೆ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ರೆಡಿ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಉಸ್ತುವಾರಿ ಸಭೆಗೆ ನಾನು ಹೋಗಿಲ್ಲ. ಅಲ್ಲಿ 600 ಶಾಸಕರ ಬೆಂಬಲ ಇದೆ. ಅಲ್ಲಿ ನಮಗೇನು ಕೆಲಸ. 600 ಶಾಸಕರು, 1500 ಸಂಸದರು, 2000 ಎಂಎಲ್‌ಸಿಗಳ ಬೆಂಬಲ ಇದೆ ಎಂದು ವ್ಯಂಗ್ಯವಾಡಿದರು.

ಯತ್ನಾಳ್‌, ಜಾರಕಿಹೊಳಿ ಹಿಂದೆ ಯಾವ ಮಗಾ ಇದ್ದಾನೆ? ಅದಕ್ಕೆ ನಾವು ಹೋಗಿಲ್ಲ. ಕಾರ್ಯಕರ್ತರ ಹುರುಪು ಆಗುವಂತೆ ಅಧ್ಯಕ್ಷರಾಗಬೇಕು. ರಾತ್ರಿ ಡಿಕೆಶಿ ಮನೆಯಲ್ಲಿ ಮುಂಜಾನೆ ಸಿದ್ದರಾಮಯ್ಯ ಮನೆ. ಮತ್ತೆ ಬೆಳಿಗ್ಗೆ 11ಕ್ಕೆ ಬೋಲೋ ಭಾರತ್‌ ಮಾತಾಕೀ ಜೈ ಎಂದರೆ ಹೇಗೆ ಎಂದು ವಿಜಯೇಂದ್ರರನ್ನು ಕುಟುಕಿದರು.

 

Tags:
error: Content is protected !!