ಬೆಂಗಳೂರು: ಶಾಸಕ ಮುನಿರತ್ನ ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿ ಮಂತ್ರಿಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ ಎಂದು ಅತ್ಯಾಚಾರ ದೂರು ನೀಡಿರುವ ಸಂತ್ರಸ್ಥೆ ಗಂಭೀರ ಆರೋಪ ಮಾಡಿದ್ದಾರೆ.
ಬೆಂಗಳೂರಿನಲ್ಲಿ ಇಂದು (ಅಕ್ಟೋಬರ್.9) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೆ ಸರ್ಕಾರದಿಂದ ಭದ್ರತೆ ಕೊಟ್ಟರೆ ನಾನು ಮಾಜಿ ಮುಖ್ಯಮಂತ್ರಿಗಳ ಹೆಸರನ್ನು ಮತ್ತು ಅವರ ಸಂಬಂಧಿತ ವಿಡಿಯೋಗಳನ್ನು ನೀಡುತ್ತೇನೆ. ಇಲ್ಲವಾದರೆ ನೀಡಲು ಸಾಧ್ಯವಿಲ್ಲ ಏಕೆಂದರೆ ಮುನಿರತ್ನ ಅವರಿಂದ ಜೀವ ಬೆದರಿಕೆ ಆಗುವ ಸಂಭವವಿದೆ ಎಂದಿದ್ದಾರೆ. ಮುನಿರತ್ನ ಅವರ ಹತ್ತಿರ ಯಾವುದೇ ಮಾಧ್ಯಮಗಳ ಬಳಿ ಇಲ್ಲದತಂಹ ಅಡ್ವಾನ್ಸ್ಡ್ ಕ್ಯಾಮೆರಾಗಳಿವೆ. ಆ ಕ್ಯಾಮೆರಾಗಳ ಮೂಲಕ ಬೇರೆ ಮಹಿಳೆಯರನ್ನು ಬಳಸಿಕೊಂಡು ಇಬ್ಬರು ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಿರುವುದಲ್ಲದೆ, ಆ ವಿಡಿಯೋಗಳನ್ನು ಪೆನ್‌ಡ್ರೈವ್‌ಗಳಲ್ಲಿ ಸಂಗ್ರಹಿಸಿಟ್ಟುಕೊಂಡಿದ್ದಾರೆ. ಆದರೆ, ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡಲು ನನ್ನನ್ನು ಬಳಕೆ ಮಾಡಿಲ್ಲ ಎಂಬ ನಿಖರವಾದ ಹೇಳಿಕೆಯನ್ನು ನೀಡಿದ್ದಾರೆ.
ಮಾಜಿ ಮುಖ್ಯಮಂತ್ರಿಗಳನ್ನು ಹನಿಟ್ರ್ಯಾಪ್ ಮಾಡುವ ಸಂದರ್ಭದಲ್ಲಿ ಯಾವುದೇ ಸಿನಿಮಾ ನಟಿಯರನ್ನು ಬಳಸಿಕೊಂಡಿಲ್ಲ. ಅದರ ಬದಲಾಗಿ ಬೇರೆ ಬೇರೆ ಮಹಿಳೆಯರನ್ನು ಬಳಸಿಕೊಂಡಿದ್ದಾರೆ. ಅಲ್ಲದೇ ಅನೇಕ ರಾಜಕೀಯ ನಾಯಕರನ್ನು ಹನಿಟ್ರ್ಯಾಪ್ ಮಾಡಲು ಸಹ ಬಳಸಿಕೊಂಡಿದ್ದಾರೆ. ಮುನಿರತ್ನ ಅವರು ಬಳಸಿಕೊಂಡಿರುವ ಸಂತ್ರಸ್ಥೆಯರು ಹೆದರಿಕೊಂಡು ಸಮ್ಮನಾಗಿದ್ದಾರೆ ಅಷ್ಟ. ಅದರ ಹೊರತಾಗಿ ಸಂತ್ರಸ್ಥ ಮಹಿಳೆಯರು ಕೂಡ ನನ್ನಂತೆಯೇ ಹೊರಗೆ ಬಂದರೆ ಎಲ್ಲ ಸತ್ಯಗಳೂ ಹೊರಗೆ ಬರಲಿವೆ ಎಂದು ಹೇಳಿದರು.
ಆರು ಮಂದಿಗೆ ಏಡ್ಸ್ ಸೋಂಕಿತರನ್ನು ಬಳಸಿ ಹನಿಟ್ರ್ಯಾಪ್
ಶಾಸಕ ಮುನಿರತ್ನ ಅವರು 6 ಮಂದಿ ಏಡ್ಸ್ ಸೋಂಕಿತ ಮಹಿಳೆಯರನ್ನು ಬಳಸಿಕೊಂಡು ಉನ್ನತ ಮಟ್ಟದ ಶಾಸಕರಿಗೆ, ಪೊಲೀಸ್ ಅಧಿಕಾರಿಗಳಿಗೆ ಹಾಗೂ ಸರ್ಕಾರದ ಉನ್ನತ ಅಧಿಕಾರಿಗಳಿಗೆ ಹನಿಟ್ರ್ಯಾಪ್ ಮಾಡಿದ್ದಾರೆ. ಅಲ್ಲದೇ ಸುಮಾರು 20 ರಿಂದ 30 ರಾಜಕೀಯ ಮುಖಂಡರನ್ನು ಸಹ ಹನಿಟ್ರ್ಯಾಪ್ ಮಾಡಿ ಪೆನ್‌ಡ್ರೈವ್‌ನಲ್ಲಿ ವಿಡಿಯೋ ಸಂಗ್ರಹ ಮಾಡಿದ್ದಾರೆ. ಈ ವಿಡಿಯೋಗಳನ್ನು ಎಸ್‌ಐಟಿ ತಂಡ ನನ್ನನ್ನು ಮಾಹಿತಿ ಕೇಳಿದಾಗ ಅವರಿಗೆ ಮಾಜಿ ಮುಖ್ಯಮಂತ್ರಿಗಳ ವಿಡಿಯೋಗಳನ್ನು ನೀಡುತ್ತೇನೆ ಎಂದು ತಿಳಿಸಿದ್ದಾರೆ.