ಬೆಂಗಳೂರು: ಮುಡಾ ಹಗರಣದಲ್ಲಿ ಜಾರಿ ನಿರ್ದೇಶನಾಲಯ ಇಲಾಖೆ ಬಗೆದಂತೆ ಹಗರಣಗಳು ಬೆಳಕಿಗೆ ಬರುತ್ತಿದ್ದು, ಇದೀಗ 812 ಸೈಟ್‌ಗಳನ್ನು ಜಪ್ತಿ ಮಾಡಲು ಇ.ಡಿ. ಇಲಾಖೆ ಮುಂದಾಗಿದೆ ಎಂದು ಮೂಲಗಳು ತಿಳಿಸಿವೆ.
ಮುಡಾ ಹಗರಣದಲ್ಲಿ ಈಗಾಗಲೇ ತನಿಖೆ ನಡೆಸುತ್ತಿರುವ ಇ.ಡಿ.ಅಧಿಕಾರಿಗಳು ಇದೀಗ 2016 ರಿಂದಲೂ ಮುಡಾದ 50:50 ಅನುಪಾತದ ಬದಲಿ ನಿವೇಶನಗಳಲ್ಲಿ 812 ಸೈಟ್‌ಗಳ ಹಂಚಿಕೆಯಲ್ಲಿ ಅಕ್ರಮವಾಗಿದೆ. ಅಲ್ಲದೇ ಮಾಜಿ ಮುಡಾ ಆಯುಕ್ತ ದಿನೇಶ್ ಕುಮಾರ್ ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದ್ದು, ಅವರ ಅವಧಿಯಲ್ಲಿಯೇ 812 ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಹೀಗಾಗಿ 812 ಸೈಟ್‌ಗಳನ್ನು ಸೀಜ್ ಮಾಡಲು ಇ.ಡಿ.ತಯಾರಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಇನ್ನೂ 2022 ರಿಂದ 2024 ದಿನೇಶ್ ಕುಮಾರ್ ಅವರ ಅವಧಿಯಲ್ಲಿ 812 ಸೈಟ್‌ಗಳನ್ನು
ಹಂಚಿಕೆ ಮಾಡಲಾಗಿದೆ. ಅಲ್ಲದೇ ಮುಡಾದ ಮಾಜಿ ಆಯುಕ್ತರಾಗಿದ್ದ ದಿನೇಶ್, ಮಹೇಶ್, ಕಾಂತರಾಜು ಹಾಗೂ ನಟೇಶ್ ಅವರ ಅವಧಿಯಲ್ಲಿ ಸುಮಾರು 888 ಸೈಟ್‌ಗಳನ್ನು ಹಂಚಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.