Mysore
27
scattered clouds

Social Media

ಶನಿವಾರ, 07 ಡಿಸೆಂಬರ್ 2024
Light
Dark

 ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಾ.ಕೆ.ಸುಧಾಕರ್‌ ವಾಗ್ದಾಳಿ

ಚಿಕ್ಕಬಳ್ಳಾಪುರ: ಒಕ್ಕಲಿಗ ಸ್ವಾಮೀಜಿ ಚಂದ್ರಶೇಖರನಾಥ ಶ್ರೀಗಳ ಮೇಲೆ ಎಫ್‌ಐಆರ್ ದಾಖಲಾಗಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ಸಂಸದ ಡಾ.ಕೆ.ಸುಧಾಕರ್‌ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಾಕ್‌ ಸ್ವತಂತ್ರ, ಪ್ರಜಾ ಪ್ರಭುತ್ವ ಅಂತ ಕಾಂಗ್ರೆಸ್‌ ಸರ್ಕಾರ ಭಾಷಣ ಮಾಡುತ್ತದೆ. ಆದರೆ ಜನರ ಹಾಗೂ ಸ್ವಾಮೀಜಿಗಳ ಅಭಿಪ್ರಾಯಕ್ಕೆ ಕಾನೂನಿನ ಕೊಕ್ಕೆ ಹಾಕುತ್ತಿದೆ ಎಂದು ಕಿಡಿಕಾರಿದರು.

ಭಾರತದ ಸಂವಿಧಾನದಲ್ಲಿ ವಾಕ್‌ ಸ್ವತಂತ್ರ ಮೂಲಭೂತ ಹಕ್ಕಾಗಿದೆ. ಒಬ್ಬೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಕಾನೂನಿನಲ್ಲಿ ಅವಕಾಶವಿದೆ. ಈ ಹಿನ್ನೆಲೆಯಲ್ಲಿ ಸ್ವಾಮೀಜಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಆದರೆ ಆ ಹೇಳಿಕೆಗಳು ತಪ್ಪು ಅಥವಾ ಸರಿ ಎಂದು ನಾನು ವಿಶ್ಲೇಷಣೆ ಮಾಡುವುದಿಲ್ಲ ಎಂದು ಹೇಳಿದರು.

ಮುಂದುವರಿದು ಮಾತನಾಡಿದ ಅವರು, ಚುನಾವಣೆ ಸಂದರ್ಭಗಳಲ್ಲಿ ಸ್ವಾಮೀಜಿಗಳು, ಸಾಧು ಸಂತರ ಪಾದಕ್ಕೆ ಬೀಳ್ತೀರಾ. ಆದರೆ ಅವರು ತಮ್ಮ ಅಭಿಪ್ರಾಯವನ್ನು ಹೇಳಿದರೆ ಅವರ ವಿರುದ್ಧವೇ ಎಫ್‌ಐಆರ್‌ ಹಾಕಿ ಅವರನ್ನು ಜೈಲಿಗೆ ಕಳುಹಿಸುತ್ತೀರಾ ಎಂದು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದರು.

Tags: