ಬೆಂಗಳೂರು: ದೇಶದಲ್ಲಿ ಚಿನ್ನದ ಖರೀದಿ ಪ್ರಮಾಣ ಗಣನೀಯವಾಗಿ ಕಡಿಮೆಯಾಗಿದೆ. ಇದರ ಪರಿಣಾಮವಾಗಿ ಚಿನ್ನದ ಆಮದು ಪ್ರಮಾಣದಲ್ಲೂ ಭಾರೀ ಇಳಿಕೆ ಕಂಡುಬಂದಿದೆ.
ಕಳೆದ ವರ್ಷ ಇದೇ ಅವಧಿಯಲ್ಲಿ ಭಾರತ 27 ಟನ್ ಚಿನ್ನವನ್ನು ಆಮದು ಮಾಡಿಕೊಂಡಿತ್ತು. ಆದರೆ ಈ ಬಾರಿ ಕೇವಲ 7.5 ಟನ್ ಚಿನ್ನ ಮಾತ್ರ ಆಮದಾಗಿದೆ ಎಂದು ವರದಿಯಾಗಿದೆ.
ಇದರೊಂದಿಗೆ ಚಿನ್ನದ ಆಮದು ಪ್ರಮಾಣದಲಲಿ 70% ಇಳಿಕೆ ದಾಖಲಾಗಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ನಗರಗಳಲ್ಲಿ ವ್ಯಾಪಾರ 50% ರಿಂದ 70% ಕುಸಿದಿದೆ ಎಂದು ಚಿನ್ನಾಭರಣ ವ್ಯಾಪಾರಿಗಳು ತಿಳಿಸಿದ್ದಾರೆ.
ಅಧಿಕ ಮಾಸದ ಹಿನ್ನೆಲೆಯಲ್ಲಿ ಮದುವೆ ಹಾಗೂ ಇತರ ಶುಭ ಕಾರ್ಯಗಳು ಕಡಿಮೆಯಾಗಿರುವುದರಿಂದ ಚಿನ್ನದ ಬೇಡಿಕೆ ಇನ್ನೂ ಇಳಿಕೆಯಾಗಿದೆ.




