Mysore
35
few clouds

Social Media

ಶುಕ್ರವಾರ, 28 ಮಾರ್ಚ್ 2025
Light
Dark

ಉದಯಗಿರಿ ಪೊಲೀಸ್‌ ಠಾಣೆ ಪ್ರಕರಣ| ಗಲಭೆಗೆ ಕಾರಣರಾದವರನ್ನು 24 ಗಂಟೆಯೊಳಗೆ ಬಂಧಿಸಬೇಕು: ಶಾಸಕ ಯತ್ನಾಳ್‌

ಬೆಂಗಳೂರು: ಮೈಸೂರಿನ ಉದಯಗಿರಿ ಪೊಲೀಸ್‌ ಠಾಣೆಗೆ ಕಲ್ಲು ತೂರಾಟ ಮಾಡಿ ಗಲಭೆಗೆ ಕಾರಣರಾದವರನ್ನು ಮುಂದಿನ 24 ಗಂಟೆಯೋಳಗೆ ಬಂಧಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ಆಗ್ರಹಿಸಿದ್ದಾರೆ.

ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, ಕ್ಷುಲ್ಲಕ ಕಾರಣಕ್ಕೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣೆಗೆ ಅನ್ಯ ಕೋಮಿನವರು ಕಲ್ಲು ತೂರಾಟ ಮಾಡಿರುವುದು ರಾಜ್ಯದ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಸಮಾಜಘಾತುಕ ಶಕ್ತಿಗಳನ್ನು ಹೆಡೆಮುರಿಕಟ್ಟಬೇಕಾಗಿದ್ದ ಸರ್ಕಾರ ಮತ್ತೊಮ್ಮೆ ತನ್ನ ಅಸಹಾಯಕತೆ ಹಾಗೂ ಅಸಮರ್ಥತೆ ತೋರಿಸಿದೆ. ಮೂಟೆಗಟ್ಟಲು ಕಲ್ಲು ದಾಳಿಕೋರರಿಗೆ ಹೇಗೆ ಸಿಕ್ಕವು? ಇದನ್ನು ಕೊಟ್ಟಿದ್ದು ಯಾರು? ಈ ಕೋಮು ಗಲಭೆಗೆ ಯಾರು ಕಾರಣ ಎಂದು ಸರ್ಕಾರ ಜನಸಾಮಾನ್ಯರಿಗೆ ಉತ್ತರಿಸಬೇಕು. ಹಾಗೆಯೇ, ಈ ಗಲಭೆಗೆ, ಕಲ್ಲುತೂರಾಟಕ್ಕೆ ಕಾರಣರಾದ ಮತಾಂಧರನ್ನು ಮುಂದಿನ 24 ಗಂಟೆಗಳಲ್ಲಿ ಬಂಧಿಸಿ ಜೈಲಿಗಟ್ಟಬೇಕು ಎಂದು ಒತ್ತಾಯಿಸಿದ್ದಾರೆ.

Tags: