Mysore
30
clear sky

Social Media

ಗುರುವಾರ, 13 ಫೆಬ್ರವರಿ 2025
Light
Dark

ಸಂವಿಧಾನ ವಿರೋಧಿಗಳಿಗೆ ಖಡಕ್‌ ಎಚ್ಚರಿಕೆ ಕೊಟ್ಟ ಸಚಿವ ಮಹದೇವಪ್ಪ

ಬೆಂಗಳೂರು: ಸಂವಿಧಾನದ ವಿರುದ್ಧ ವಿಷಕಾರುವವರ ಮೇಲೆ ದೇಶದ್ರೋಹ ಪ್ರಕರಣ ದಾಖಲಾಗಲಿ ಎಂದು ಸಚಿವ ಡಾ.ಎಚ್.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ.

ರಾಮರಾಜ್ಯ, ಮನುಸ್ಮೃತಿ, ಧರ್ಮಶಾಸ್ತ್ರ ಹಾಗೂ ಚಾಣಕ್ಯನ ಪುಸ್ತಕಗಳನ್ನು ಆಧರಿಸಿದ 501 ಪುಟಗಳ ಸಂವಿಧಾನವನ್ನು ಫೆಬ್ರವರಿ.3ರಂದು ಮಹಾಕುಂಭಮೇಳದಲ್ಲಿ ಅನಾವರಣ ಮಾಡುವುದಾಗಿ ಉತ್ತರ ಪ್ರದೇಶದ ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ್‌ ಸ್ವರೂಪ್‌ ಮಹಾರಾಜ್‌ ಹೇಳಿದ್ದರು.

ಸ್ವಾಮೀಜಿ ಹೇಳಿಕೆ ಖಂಡಿಸಿದ ಸಮಾಜ ಕಲ್ಯಾಣ ಇಲಾಖೆ ಸಚಿವ ಮಹದೇವಪ್ಪ ಅವರು, ಪತ್ರಿಕಾ ಹೇಳಿಕೆ ನೀಡಿದ ಕಿಡಿಕಾರಿದ್ದಾರೆ.

ಇಡೀ ದೇಶವೇ ಎಲ್ಲರ ಹಿತ ಕಾಯುವ ಮತ್ತು ಜನ ಸಾಮಾನ್ಯರ ಸಮಾನವಾದ ಏಳಿಗೆಯನ್ನು ಬಯಸಿದ ದೇಶದ ಸಂವಿಧಾನಕ್ಕೆ ನಮನ ಸಲ್ಲಿಸುತ್ತಿದ್ದರೆ ಅತ್ತ ಭಾರತದ ಭಾಗವೇ ಆಗಿರುವ ಉತ್ತರ ಪ್ರದೇಶದಲ್ಲಿ ಶಾಂಭವಿ ಪೀಠಾಧೀಶ್ವರ ಸ್ವಾಮಿ ಆನಂದ್‌ ಸ್ವರೂಪ್‌ ಮಹಾರಾಜ್‌ ಅವರು ರಾಮರಾಜ್ಯ, ಮನುಸ್ಮೃತಿ, ಧರ್ಮಶಾಸ್ತ್ರ ಹಾಗೂ ಚಾಣಕ್ಯನ ಪುಸ್ತಕಗಳನ್ನು ಆಧರಿಸಿದ 501 ಪುಟಗಳ ಸಂವಿಧಾನವನ್ನು ಅನಾವರಣ ಮಾಡುವುದಾಗಿ ಹೇಳಿದ್ದಾರೆ.

ಇದನ್ನು ದ್ರೋಹದ ಕೃತ್ಯ ಎಂದು ಜನರಿಗೆ ತಿಳಿಸುವ ಪ್ರಯತ್ನವನ್ನು ಮಾಧ್ಯಮಗಳು ಮಾಡದಿರುವುದು ನನ್ನಲ್ಲಿ ಅಚ್ಚರಿ ಮೂಡಿಸಿದೆ ಎಂದರು.

ಸಂವಿಧಾನದ ಮಹತ್ವ ಅರಿಯದೇ, ವಿಷಕಾರಿಯಾಗಿ ವರ್ತಿಸುವ ಇಂತ ಸ್ವಾಮೀಜಿಗಳ ವಿರುದ್ಧ ಕೇಂದ್ರ ಸರ್ಕಾರ ಕೂಡಲೇ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದು ತಿಳಿಸಿದ್ದಾರೆ.

 

 

Tags: