Mysore
24
scattered clouds

Social Media

ಗುರುವಾರ, 13 ನವೆಂಬರ್ 2025
Light
Dark

ಔಷಧಿಯ ಸಸ್ಯಕಾಶಿ ಕಪ್ಪತ್ತಗುಡ್ಡ ಬೆಂಕಿಗಾಹುತಿ: ಪ್ರಾಣಿ-ಪಕ್ಷಿಗಳು ಸುಟ್ಟು ಕರಕಲು

ಗದಗ: ಉತ್ತರ ಕರ್ನಾಟಕದ ಸೈಹಾದ್ರಿ, ಆಯುರ್ವೇದ ಔಷಧಿಯ ಸಸ್ಯಕಾಶಿ, ದೇಶದಲ್ಲಿಯೇ ಶುದ್ಧ ಗಾಳಿಗೆ ಹೆಸರಾದ ಜಿಲ್ಲೆಯ ಕಪ್ಪತ್ತಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೇಸಿಗೆ ಆರಂಭಕ್ಕೂ ಮುನ್ನ ಕಪ್ಪತ್ತಗುಡ್ಡ ಬೆಂಕಿಗಾಹುತಿಯಾಗಿದ್ದು, ಮುಂಡರಗಿ ತಾಲ್ಲೂಕಿನ ಡೋಣಿ ಗ್ರಾಮದ ಬಳಿ ಗುಡ್ಡಕ್ಕೆ ಬೆಂಕಿ ಹತ್ತಿಕೊಂಡಿದೆ.

ಡೋಣಿ ಬಳಿಯ ನಂದಿವೇರಿ ಮಠದ ಹಿಂಭಾಗ, ಬಂಗಾರಕೊಳ್ಳ, ದೊಡ್ಡ ಬಂಗಾರಕೊಳ್ಳ, ಉಪ್ಪಾರತಟ್ಟು, ನವಣೆ ರಾಶಿ, ಎತ್ತಿನಗುಡ್ಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

ಬೆಂಕಿಯ ಕೆನ್ನಾಲಿಗೆಗೆ ಸುಮಾರು ನೂರಾರು ಹೆಕ್ಟೇರ್‌ ಪ್ರದೇಶದ ಅರಣ್ಯ ಸುಟ್ಟು ಕರಕಲಾಗಿದೆ. ಬೆಂಕಿಗೆ ಸಿಲುಕಿ ಸರೀಸೃಪಗಳು, ಔಷಧೀಯ ಸಸ್ಯಗಳು, ಪ್ರಾಣಿ, ಪಕ್ಷಿಗಳು ಬೆಂಕಿಗಾಹುತಿಯಾಗಿವೆ.

ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Tags:
error: Content is protected !!