Mysore
30
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಅಂಬೇಡ್ಕರ್‌ರವರ ವಿಚಾರದಲ್ಲಿ ಕಾಂಗ್ರೆಸ್‌ ತಪ್ಪಾಗಿ ನಡೆದುಕೊಂಡಡಿದೆಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ: ಮಲ್ಲಿಕಾರ್ಜುನ ಖರ್ಗೆ

ಬೆಳಗಾವಿ: ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರ ವಿಚಾರದಲಲಿ ಕಾಂಗ್ರೆಸ್ ತಪ್ಪಾಗಿ ನಡೆದುಕೊಂಡಿತೆಂದು ಬಿಜೆಪಿ ಅಪಪ್ರಚಾರ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಬೆಳಗಾವಿಯಲ್ಲಿ ಇಂದು(ಜನವರಿ.21) ಕಾಂಗ್ರೆಸ್‌ ವತಿಯಿಂದ ಆಯೋಜಿಸಲಾಗಿದ್ದ ಜೈ ಬಾಪು, ಜೈ ಭೀಮ್‌, ಜೈ ಸಂವಿಧಾನ ಸಮಾವೇಶದಲ್ಲಿ ಮಾತನಾಡಿದ ಅವರು, ಇದು ಹೊಸ ವರ್ಷದ ಶುಭಾರಂಭ, ಈ ಹೊಸ ವರ್ಷದಲ್ಲಿ ನಾವು ʼಜೈ ಬಾಪು, ಜೈ ಭೀಮ್, ಜೈ ಸಂವಿಧಾನ’ ಸಮಾವೇಶ ನಡೆಸುತ್ತಿದ್ದೇವೆ. 2024ರ ಡಿಸೆಂಬರ್.27 ರಂದು ನಡೆಯಬೇಕಾಗಿದ್ದ ಈ ಸಮಾವೇಶ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ನಿಧನದ ಹಿನ್ನೆಲೆ ಮುಂದೂಡಲಾಗಿತ್ತು. ಮನಮೋಹನ್ ಸಿಂಗ್ ಅವರು ಕೊಟ್ಟ ಕೊಡುಗೆಗಳನ್ನು ಇಡೀ ದೇಶ ಕೊಂಡಾಡಿದೆ ಎಂದರು.

ಸಂಸತ್ತಿನ ಎದುರಿಗೆ ಅಂಬೇಡ್ಕರ್ ಪ್ರತಿಮೆ ನಿಲ್ಲಿಸಿದ್ದು ಬಿಜೆಪಿಯವರಾ? ಆದರೆ ಈಗ ಮೋದಿಯವರು ಎದುರಿಗೆ ಇದ್ದ ಪ್ರತಿಮೆಯನ್ನು ಮೂಲೆಗೆ ತೆಗೆದುಕೊಂಡು ಹೋಗಿ ಇಟ್ಟಿದ್ದಾರೆ. ಇಂತಹರು ಈಗ ಅಂಬೇಡ್ಕರ್ ವಿಚಾರದಲ್ಲಿ ನಾಟಕ ಮಾಡುತ್ತಿದ್ದಾರೆ. ಸಂವಿಧಾನ ಸುಟ್ಟವರು, ಬಾಬಾ ಸಾಹೇಬರ ಪುತ್ಥಳಿ ಸುಟ್ಟವರು, ಪಂಡಿತ್ ಜವಾಹರ ಲಾಲ್ ನೆಹರು ಅವರ ಪುತ್ಥಳಿ ಸುಟ್ಟವರು ಯಾರಾದರೂ ಇದ್ದರೆ, ಅದು ಬಿಜೆಪಿಯವರು, ಆರ್.ಎಸ್.ಎಸ್‌ನವರು ಹಾಗೂ ಹಿಂದೂ ಮಹಾಸಭಾದವರಾಗಿದ್ದಾರೆ. ಈ ವಿಚಾರಗಳೆಲ್ಲವೂ ಇತಿಹಾಸದಲ್ಲಿವೆ. ಹೀಗಾಗಿ ನಾನು ಇದನ್ನು ಎಲ್ಲಿ ಬೇಕಾದರೂ ನಿರೂಪಿಸುತ್ತೇನೆ. ಅಂಬೇಡ್ಕರ್ ಅವರ ವಿಚಾರದಲ್ಲಿ ನಮ್ಮ ನಮ್ಮ ನಡುವೆಯೇ ಜಗಳ ಹಚ್ಚಲು ಪ್ರಯತ್ನಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಇನ್ನೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದ್ದು ಯಾರು? ಎರಡು ಬಾರಿ ಅಂಬೇಡ್ಕರ್ ಅವರನ್ನು ಸರ್ವಾನುಮತದಿಂದ ಆರಿಸಿ ತಂದಿದ್ದು ನಾವು. ರಾಜ್ಯಸಭಾ ಸದಸ್ಯರಾಗಿದ್ದ ಎಂ.ಆರ್. ಜೈಕರ್ ಅವರ ರಾಜೀನಾಮೆ ಕೊಡಿಸಿ, ಆ ಜಾಗದಲ್ಲಿ ಅಂಬೇಡ್ಕರ್ ಅವರನ್ನು ಆರಿಸಿ ತಂದಿದ್ದು ಕಾಂಗ್ರೆಸ್. ಹೀಗಿರುವಾಗ ಪಂಡಿತ್ ಜವಾಹರ್ ಲಾಲ್ ನೆಹರು ಅವರು, ಮಹಾತ್ಮ ಗಾಂಧೀಜಿಯವರು ಹಾಗೂ ನಮ್ಮ ಪಕ್ಷದ ಮೇಲೆ ಆಪಾದನೆ ಮಾಡುತ್ತೀರಿ, ನೀವು ಏನು ಮಾಡಿದಿರಿ ಅವರಿಗೆ? ಎಂದು ಪ್ರಶ್ನಿಸಿದ್ದಾರೆ.

ನೀವು ಹೇಳುತ್ತೀರಿ, “ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬರೆದ ಸಂವಿಧಾನ ಮನುಸ್ಮೃತಿ ಪ್ರಕಾರ ಇಲ್ಲ, ಅದಕ್ಕಾಗಿ ಈ ಸಂವಿಧಾನವನ್ನ ನಾವು ಒಪ್ಪುವುದಿಲ್ಲ, ತ್ರಿವರ್ಣ ಧ್ವಜವನ್ನ ಒಪ್ಪಲ್ಲ, ಅಶೋಕ ಚಕ್ರ ಒಪ್ಪಲ್ಲ,” ಎಂದು. ಹೀಗೆ ಹೇಳಿದವರು ಈಗ ಅಂಬೇಡ್ಕರ್ ಅವರ ಬಗ್ಗೆ ಮಾತನಾಡುತ್ತಿದ್ದೀರಿ, ನಾಚಿಕೆಯಾಗಬೇಕು ನಿಮಗೆ. ನಿಮ್ಮ 50 ವರ್ಷಗಳ ಇತಿಹಾಸದಲ್ಲಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ತಮ್ಮ ಕಚೇರಿ ಮೇಲೆ ಎಂದೂ ತ್ರಿವರ್ಣ ಧ್ವಜ ಹಾರಿಸಿಲ್ಲ ಎಂದು ಕಿಡಿಕಾರಿದರು.

Tags: