Mysore
21
overcast clouds

Social Media

ಶುಕ್ರವಾರ, 05 ಜೂನ್ 2026
Light
Dark

ಬೇಸಿಗೆಗೆ ಬತ್ತುತ್ತಿವೆ ಬೆಂಗಳೂರಿನ ಪ್ರಮುಖ ಕೆರೆಗಳು

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತಾಪ ಹೆಚ್ಚಾಗುತ್ತಲೇ ಇದೆ. ಇನ್ನು ಬೆಂಗಳೂರು ನಗರದಲ್ಲಿ ಬಿರು ಬಿಸಿಲಿಗೆ ನಗರದ ಪ್ರಮುಖ ಕೆರೆಗಳು ಬತ್ತುತ್ತಿವೆ.

ಹಂತ ಹಂತವಾಗಿ ಬಿಸಿಲಿಗೆ ಕೆರೆಗಳು ಸೊರಗಿ ಹೋಗುತ್ತಿವೆ. ನಗರದ ಲಾಲ್‌ಬಾಗ್‌ ಇದಕ್ಕೆ ಸಾಕ್ಷಿಯಂತಿದೆ.

ನಗರದ ಮತ್ತೊಂದು ಪ್ರಮುಖ ಕೆರೆ ಸ್ಯಾಂಕಿ ಕೆರೆ. ಸ್ಯಾಂಕಿ ಕೆರೆಯಲ್ಲೂ ಐದಾರು ಅಡಿಯಷ್ಟು ನೀರು ಇಳಿದು ಹೋಗಿದೆ.

ಐತಿಹಾಸಿಕ ಕೆರೆಗಳು ಬತ್ತುತ್ತಿರುವುದರಿಂದ ಇನ್ನಷ್ಟು ಬಿಸಿಲ ತಾಪ ಹೆಚ್ಚಬಹುದು ಎಂಬ ಆತಂಕ ಜನರಲ್ಲಿ ಹೆಚ್ಚಾಗುತ್ತಿದೆ.

 

Tags:
error: Content is protected !!