Mysore
13
clear sky

Social Media

ಸೋಮವಾರ, 15 ಡಿಸೆಂಬರ್ 2025
Light
Dark

ರಾಜ್ಯದ ವಿವಿಧೆಡೆ ಲೋಕಾಯುಕ್ತ ದಾಳಿ ; ಅಧಿಕಾರಿಗಳ ಮನೆ,ಕಚೇರಿ ತೀವ್ರ ಪರಿಶೀಲನೆ

ಬೆಂಗಳೂರು : ರಾಜ್ಯದ ಹಲವೆಡೆ 7 ಸರ್ಕಾರಿ ಅಧಿಕಾರಿಗಳ ಮನೆಗಳ ಮೇಲೆ ಗುರುವಾರ ಬೆಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು ನಗರ 12 ಕಡೆ, ಬೆಂಗಳೂರು ಗ್ರಾಮಾಂತರ 8, ತುಮಕೂರು 7, ಯಾದಗಿರಿ 5, ಮಂಗಳೂರು 4 ಹಾಗೂ ವಿಜಯಪುರದಲ್ಲಿ 4 ಸ್ಥಳಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲನೆ ಮಾಡಿದ್ದಾರೆ.

ತುಮಕೂರಿನ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ರಾಜಶೇಖರ್, ದಕ್ಷಿಣ ಕನ್ನಡ ಜಿಲ್ಲೆಯ ಸರ್ವೇ ಮೇಲ್ವಿಚಾರಕ ಮಂಜುನಾಥ್, ವಿಜಯಪುರದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕಿ ರೇಣುಕಾ, ಬೆಂಗಳೂರು ನಗರದ ನಗರ ಮತ್ತು ಗ್ರಾಮೀಣ ಯೋಜನಾ ನಿರ್ದೇಶನಾಲಯದ ಹೆಚ್ಚುವರಿ ನಿರ್ದೇಶಕ ಮುರಳಿ ಟಿ.ವಿ. ಕಾನೂನು ಮಾಪನಶಾಸ್ತ್ರದ ಇನ್ಸ್ಪೆಕ್ಟರ್ ಎಚ್.ಆರ್.ನಟರಾಜ್, ಬೆಂಗಳೂರು ಗ್ರಾಮಾಂತರದ ಹೊಸಕೋಟೆ ತಾಲೂಕು ಕಚೇರಿಯ ಎಸ್.ಡಿ.ಎ. ಅನಂತ್ ಕುಮಾರ್ ಹಾಗೂ ಯಾದಗಿರಿಯ ಶಹಾಪುರ ತಾಲೂಕಿನ ಉಮಾಕಾಂತ ಎಂಬವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಮನೆಯಲ್ಲಿರುವ ದಾಖಲೆಗಳನ್ನು ಪರಿಶೀಲನೆ ಮಾಡಲಾಗಿದೆ.

ದಾಳಿಗೊಳಗಾದ ಅಧಿಕಾರಿಗಳ ವಿವರ
1. ತುಮಕೂರು, ರಾಜಶೇಖರ್, ಯೋಜನಾ ನಿರ್ದೇಶಕರು, ನಿರ್ಮಿತಿ ಕೇಂದ್ರ
2. ಮಂಗಳೂರು: ಮಂಜುನಾಥ್, ಸರ್ವೆ ಮೇಲ್ವಿಚಾರಕರು, ದಕ್ಷಿಣ ಕನ್ನಡ
3. ವಿಜಯಪುರ : ಶ್ರೀಮತಿ ರೇಣುಕಾ. ಸಾತರ್ಲೆ, ಡಾ.ಬಿ ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ
4. ಬೆಂಗಳೂರು ನಗರ : ಮುರಳಿ ಟಿವಿ, ಹೆಚ್ಚುವರಿ ನಿರ್ದೇಶಕರು, ನಗರ ಮತ್ತು ಗ್ರಾಮಾಂತರ ಯೋಜನಾ ನಿರ್ದೇಶನಾಲಯ.
5. ಬೆಂಗಳೂರು: ಎಚ್ ಆರ್ ನಟರಾಜ್, ಇನ್ಸ್‍ಪೆಕ್ಟರ್, ಕಾನೂನು ಮಾಪನಶಾಸ್ತ್ರ
6. ಬೆಂಗಳೂರು ಗ್ರಾಮಾಂತರ, ಅನಂತ್ ಕುಮಾರ್ , ಹೊಸಕೋಟೆ ತಾಲೂಕು ಕಛೇರಿ
7. ಯಾದಗಿರಿ: ಉಮಾಕಾಂತ್, ಶಹಾಪುರ ತಾಲೂಕು, ಯಾದಗಿರಿ

Tags:
error: Content is protected !!