Mysore
23
overcast clouds

Social Media

ಶನಿವಾರ, 13 ಜೂನ್ 2026
Light
Dark

ಪ್ರತಾಪ್‌ ಸಿಂಹಾ ವಿರುದ್ಧ ತನಿಖೆಯಾಗಲಿ : ಡಾ.ಹೆಚ್‌.ಸಿ.ಮಹದೇವಪ್ಪ

ಮೈಸೂರು: ನವದೆಹಲಿಯ ನೂತನ ಸಂಸತ್‌ ಭವನದಲ್ಲಿ ನಡೆದ ಘಟನೆ ಬಗ್ಗೆ ಸಂಸದ ಪ್ರತಾಪ್‌ ಸಿಂಹ ವಿರುದ್ಧ ತನಿಖೆಯಾಗಲಿ ಎಂದು ಮೈಸೂರು ಉಸ್ತುವಾರಿ ಸಚಿವ ಡಾ.ಹೆಚ್‌.ಸಿ.ಮಹದೇವ್‌ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

2024ರ ಲೋಕಸಭಾ ಚುನಾವಣೆ ಸಮೀಪವಾಗುತ್ತಿದೆ. ಈ ಸಂದರ್ಭದಲ್ಲಿ ಸಂಸತ್‌ ಭವನದಲ್ಲಿ ನಡೆದ ಘಟನೆ ಆಘಾತಕಾರಿ. ಭದ್ರತಾ ವೈಪಲ್ಯದಿಂದ ಆತಂಕ ಸೃಷ್ಠಿಸಿದ ಆರೋಪಿಗಳಿಗೆ ಮೈಸೂರು ಲೋಕಸಭಾ ಸದಸ್ಯರಾದ ಪ್ರತಾಪ್‌ ಸಿಂಹ ಅವರೇ ಪಾಸ್‌ ನೀಡಿರುವುದು ಧೃಡಪಟ್ಟಿದೆ.

ಒಂದು ವೇಳೆ ದೊಡ್ಡ ಅನಾಹುತವೇನಾದರು ಸಂಭವಿಸಿದ್ದರೇ ಯಾರು ಹೊಣೆ? ಭದ್ರತಾ ಸಂಬಂಧ ಸಂಸದ ಪ್ರತಾಪ್‌ ಸಿಂಹಾ ಅವರನ್ನು ತನಿಖೆಗೆ ಒಳಪಡಿಸಿ ನಿಜ ಸಂಗತಿಯನ್ನು ಹೊರಗೆಳೆಯಬೇಕಾಗಿದೆ ಎಂದು ಕೇಂದ್ರ ಸರ್ಕಾರವನ್ನು ಮನವಿ ಮಾಡುತ್ತೇನೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!