Mysore
21
overcast clouds

Social Media

ಶುಕ್ರವಾರ, 13 ಜೂನ್ 2025
Light
Dark

ಲಕ್ಷ್ಮಣ ಸವದಿ ಕುಟುಂಬಕ್ಕೂ ಹುಲಿ ಉಗುರಿನ ಉರುಳು : ಪುತ್ರ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಫೋಟೋ ವೈರಲ್

ಚಿಕ್ಕೋಡಿ : ಹುಲಿ ಉಗುರಿನ ಪೆಂಡೆಂಟ್ ಈಗ ಇಡೀ ರಾಜ್ಯದಲ್ಲಿ ಸಂಚಲನ ಮೂಡಿಸಿದೆ. ಈಗಾಗಲೇ ಅರಣ್ಯಾಧಿಕಾರಿಗಳು ಅನೇಕ ನಟರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ಮತ್ತೊಂದೆಡೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ಕೊರಳಲ್ಲೂ ಪೆಂಟೆಂಟ್ ಪತ್ತೆಯಾಗಿದ್ದು ಅರಣ್ಯ ಅಧಿಕಾರಿಗಳು ಹೆಬ್ಬಾಳ್ಕರ್ ಮನೆಯಲ್ಲಿ ಶೋಧ ನಡೆಸಿದ್ದು,ಮೃಣಾಲ್​ನನ್ನು ವಿಚಾರಣೆ ನಡೆಸಿದ್ದಾರೆ.

ಇದೀಗ ಶಾಸಕ ಲಕ್ಷ್ಮಣ ಸವದಿ ಕುಟುಂಬಕ್ಕೂ ಹುಲಿ ಉಗುರು ಸಂಕಷ್ಟ ತಂದಿದೆ. ಸವದಿ ಪುತ್ರ ಸುಮಿತ್ ಹುಲಿ ಉಗುರಿನ ಪೆಂಡೆಂಟ್ ಧರಿಸಿದ ಫೋಟೋ ವೈರಲ್ ಆಗಿದೆ.

ಅಥಣಿ ಕಾಂಗ್ರೆಸ್ ಶಾಸಕ ಲಕ್ಷ್ಮಣ್ ಸವದಿ ದ್ವಿತೀಯ ಪುತ್ರ ಸುಮಿತ್ ಸವದಿ ಮದುವೆ ಸಮಾರಂಭದ ವೇಳೆ ಹುಲಿ ಉಗುರಿನ ಮಾದರಿಯ ಪೆಂಡೆಂಟ್ ಧರಿಸಿರುವ ಫೋಟೋಸ್ ವೈರಲ್ ಆಗಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಬಳಿಕ ಈಗ ಲಕ್ಷಣ್ ಸವದಿ ಕುಟುಂಬಕ್ಕೆ ಹುಲಿ ಉಗುರು ಕಂಟಕವಾಗಿದೆ. ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ಅವರ ದ್ವಿತೀಯ ಪುತ್ರ ಸುಮಿತ್ ಕೊರಳಲ್ಲೂ ಹುಲಿ ಉಗುರು ಮಾದರಿಯ ಪೆಂಡೆಂಟ್ ಕಂಡು ಬಂದಿದೆ. ಕಳೆದ ವರ್ಷ ಸುಮಿತ್ ಸವದಿ ಮದುವೆ ಸಮಾರಂಭದ ವೇಳೆ ಸುಮಿತ್ ಅವರು ಎರಡು ಹುಲಿ ಉಗುರುಗಳಿರುವ ಪೆಂಡೆಂಟ್ ಧರಿಸಿದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!