Mysore
35
few clouds

Social Media

ಗುರುವಾರ, 09 ಏಪ್ರಿಲ 2026
Light
Dark

ಡಮ್ಮಿ ಅಭ್ಯರ್ಥಿ ಎಂದವರೇ ಡಮ್ಮಿಯಾಗಿದ್ದಾರೆ: ಈಶ್ವರಪ್ಪಗೆ ಮಧು ಬಂಗಾರಪ್ಪ ಟಾಂಗ್‌

ಶಿವಮೊಗ್ಗ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಗೀತಾ ಶಿವರಾಜ್‌ ಕುಮಾರ್‌ ಅವರನ್ನು ಡಮ್ಮಿ ಅಭ್ಯರ್ಥಿ ಎಂದು ಟೀಕಿಸಿದ್ದ ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪಗೆ ಸಚಿವ ಮಧು ಬಂಗಾರಪ್ಪ ಟಾಂಗ್‌ ಕೊಟ್ಟಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಮಧು ಬಂಗಾರಪ್ಪ, ಡಮ್ಮಿ ಅಭ್ಯರ್ಥಿ ಎಂಬುದು ಗೀತಾ ಶಿವಕುಮಾರ್‌ಗೆ ಅನ್ವಯವಾಗಲ್ಲ. ಗೀತಾರನ್ನ ಡಮ್ಮಿ ಅಭ್ಯರ್ಥಿ ಎಂದು ಟೀಕಿಸಿದವರೇ ಇಂದು ಡಮ್ಮಿಯಾಗಿದ್ದಾರೆ ಎಂದು ಲೇವಡಿ ಮಾಡಿದರು.

ಬಿಜೆಪಿ ಅಭ್ಯರ್ಥಿ ಬಿ.ವೈ ರಾಘವೇಂದ್ರಗೆ ಜನರ ಮುಂದೆ ಹೋಗುವ ಧೈರ್ಯವಿಲ್ಲ. ಅವರನ್ನ ನೋಡಿದರೇ ನನಗೆ ಅಳಬೇಕೋ, ನಗಬೇಕೋ ಗುತ್ತಾಗುತ್ತಿಲ್ಲ ಎಂದು ಸಚಿವ ಮಧು ಬಂಗಾರಪ್ಪ ವ್ಯಂಗವ್ಯಾಡಿದರು.

ಪುತ್ರ ಕಾಂತೇಶ್ ಗೆ ಟಿಕೆಟ್ ಕೈತಪ್ಪಿದ ಹಿನ್ನಲೇ ಶಿವಮೊಗ್ಗದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಕೆ.ಎಸ್ ಈಶ್ವರಪ್ಪ ಸ್ಪರ್ಧಿಸುತ್ತಿದ್ದಾರೆ.
ಈ ಮಧ್ಯೆ ಬೆಂಗಳೂರಿಗೆ ಆಗಮಿಸಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈಶ್ವರಪ್ಪಗೆ ಕರೆ ಮಾಡಿ ದೆಹಲಿಗೆ ಬರುವಂತೆ ತಿಳಿಸಿದರು. ಈ ಹಿನ್ನೆಲೆಯಲ್ಲಿ ದೆಹಲಿಗೆ ತೆರಳಿದ್ದ ಕೆ.ಎಸ್ ಈಶ್ವರಪ್ಪ ಅಮಿತ್ ಶಾ ಭೇಟಿಯಾಗಲು ಅವಕಾಶ ಸಿಗದ ಹಿನ್ನೆಲೆ ವಾಪಸ್ ಆಗಿದ್ದರು.

Tags:
error: Content is protected !!