Mysore
26
broken clouds

Social Media

ಶುಕ್ರವಾರ, 09 ಜನವರಿ 2026
Light
Dark

ಕೋಗಿಲು ಲೇಔಟ್‌ ಅಕ್ರಮ ಮನೆಗಳ ತೆರವು ವಿಚಾರ: ಜಿಬಿಎ ಕೈಸೇರಿದ ನಿರಾಶ್ರಿತರ ಮಾಹಿತಿ

ಬೆಂಗಳೂರು: ಕೋಗಿಲು ಲೇಔಟ್‌ನಲ್ಲಿ ಅನಧಿಕೃತ ಮನೆಗಳ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ನಿರಾಶ್ರಿತರ ಮಾಹಿತಿ ಜಿಬಿಎ ಕೈಸೇರಿದ್ದು ಒಟ್ಟು 188 ಮನೆಗಳನ್ನು ಗುರುತಿಸಲಾಗಿದೆ.

ಕಂದಾಯ ಇಲಾಖೆ ಹಾಗೂ ಉತ್ತರ ನಗರ ಪಾಲಿಕೆಯಿಂದ ಜಿಬಿಎಗೆ ವರದಿ ಸಲ್ಲಿಕೆ ಮಾಡಲಾಗಿದ್ದು, 167ಮನೆಗಳ ತೆರವಿನಲ್ಲಿ 188 ಕುಟುಂಬಗಳು ನಿರಾಶ್ರಿತರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

188 ಕುಟುಂಬಗಳ ಒಟ್ಟು 1007 ಜನ ಸದಸ್ಯರು ಸದ್ಯದ ಅಧಿಕೃತ ನಿರಾಶ್ರಿತರಾಗಿದ್ದಾರೆ. 188 ಕುಟುಂಬದ ಮುಖ್ಯಸ್ಥರು 475 ಜನ ವಯಸ್ಕರು, 34 ಮಕ್ಕಳು ಮುಸ್ಲಿಂ ಕುಟುಂಬಗಳು 156, ಹಿಂದೂ31 ಹಾಗೂ ಕ್ರಿಶ್ಚಿಯನ್‌ 1 ಕುಟುಂಬ ನಿರಾಶ್ರಿತರಾಗಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮತ್ತೊಮ್ಮೆ ಪರಿಶೀಲನೆ ನಡೆಸಿದ ಬಳಿಕ ಜಿಬಿಎ ಸರ್ಕಾರಕ್ಕೆ ಈ ವರದಿಯನ್ನು ಸಲ್ಲಿಸಲಿದೆ ಎನ್ನಲಾಗಿದೆ. ಯಲಹಂಕ ಬಳಿಯ ಫಕೀರ ಲೇಔಟ್‌, ಹೊಸ ಫಕಿರ್‌ ಲೇಔಟ್, ವಾಸಿಂ ಲೇಔಟ್‌ನಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿಕೊಂಡಿದ್ದನ್ನು ಸರ್ಕಾರ ತೆರವುಗೊಳಿಸಿತ್ತು.

 

Tags:
error: Content is protected !!