Mysore
14
clear sky

Social Media

ಗುರುವಾರ, 12 ಫೆಬ್ರವರಿ 2026
Light
Dark

ಕೊಡಗು: ನಾಗರಹೊಳೆಯಲ್ಲಿ ಬೀಡುಬಿಟ್ಟ ವಯನಾಡಿನಲ್ಲಿ ವ್ಯಕ್ತಿ ಕೊಂದಿದ್ದ ಆನೆ

ಮಡಿಕೇರಿ : ಕೇರಳದ ವಯನಾಡಿನಲ್ಲಿ ವ್ಯಕ್ತಿ ಒಬ್ಬರನ್ನು ಇತ್ತೀಚೆಗೆ ಹತ್ಯೆ ಮಾಡಿದ್ದ ಕಾಡಾನೆಯ ಸೆರೆಗೆ ಕೊಡಗು ಜಿಲ್ಲೆಯ ನಾಗರಹೊಳೆ ಅಭಯಾರಣ್ಯದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಮಖಾನ್ ಹೆಸರಿನ ಕಾಡಾನೆ ಸದ್ಯ ನಾಗರಹೊಳೆ ಅಭಯಾರಣ್ಯ ಪ್ರದೇಶದಲ್ಲಿ ಓಡಾಡುತ್ತಿದೆ ಎಂಬುದು ರೇಡಿಯೋ ಕಾಲರ ಮೂಲಕ ತಿಳಿದು ಬಂದಿದೆ. ಹೀಗಾಗಿ ನಾಗರಹೊಳೆಯ ನಾಣಚ್ಚಿ, ಹುಲಿಕಲ್ಲು, ಆಲಂದೋಡು ವ್ಯಾಪ್ತಿಯಲ್ಲಿ ಆಣೆ ಸೆರೆಗೆ ಕ್ರಮ ವಹಿಸಲಾಗಿದೆ.

ಮುಖಾನ್‌ ಆನೆಗೆ ಬೇಲೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ರೇಡಿಯೋ ಕಾಲರ್ ಅಳವಡಿಸಿ ಅದನ್ನು ಚಾಮರಾಜನಗರ ವ್ಯಾಪ್ತಿಯ ಕಾಡಿನಲ್ಲಿ ಬಿಡಲಾಗಿತ್ತು. ಅದು ಅಲ್ಲಿಂದ ಕೇರಳದ ವಯನಾಡಿಗೆ ತೆರಳಿತ್ತು.

ಕೇರಳದ ವಯನಾಡಿನಲ್ಲಿ ಫೆಬ್ರವರಿ 10 ರಂದು ವಯನಾಡಿನ ಪ್ರಜೀಶ್ ಎಂಬವವರ ಮೇಲೆ ದಾಳಿ ಮಾಡಿ ಹತ್ಯೆ ಮಾಡಿತ್ತು. ಈ ಆನೆಗೆ ಕರ್ನಾಟಕದಲ್ಲಿ ರೇಡಿಯೋ ಕಾಲರ್ ಅಳವಡಿಸಿರುವ ಕಾರಣ ಮೃತ ವ್ಯಕ್ತಿಯ ಕುಟುಂಬದವರಿಗೆ 15 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿತ್ತು.

ಪರಿಹಾರದ ಹಣಕ್ಕೆ ರಾಜಕೀಯ ಬಣ್ಣ ಬಂದದ್ದರಿಂದ ಮೃತ ವ್ಯಕ್ತಿಯ ಕುಟುಂಬದವರು, ಕರ್ನಾಟಕ ಸರ್ಕಾರದ ಪರಿಹಾರ ನಾವು ಸ್ವೀಕರಿಸುವುದಿಲ್ಲ ಎಂದು ಹೇಳಿದ್ದರು.

ಈ ಎಲ್ಲ ವಿದ್ಯಮಾನಗಳ ಬಳಿಕ ಕಾಡಾನೆಯ ತೆರಿಗೆ ಅರಣ್ಯ ಇಲಾಖೆ ಮತ್ತೆ ಕ್ರಮ ಕೈಗೊಳ್ಳಲು ಮುಂದಾಗಿತ್ತು. ಅದರಂತೆ ಇದೀಗ ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಆನೆ ಇರುವ ಸುಳಿವು ಸಿಕ್ಕಿದ್ದು, ಅರಣ್ಯ ಇಲಾಖೆ ತ್ವರಿತ ಕಾರ್ಯಾಚರಣೆ ಮಾಡಲು ಮುಂದಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!