Mysore
18
clear sky

Social Media

ಗುರುವಾರ, 29 ಜನವರಿ 2026
Light
Dark

ಗ್ರೇಟರ್ ಬೆಂಗಳೂರಿನಿಂದ ಕೆಂಪೇಗೌಡರ ಬೆಂಗಳೂರಿಗೆ ಧಕ್ಕೆ ಇಲ್ಲ ; ಜಾರ್ಜ್‌ ಸ್ಪಷ್ಟನೆ

kj George

ಬೆಂಗಳೂರು : ಗ್ರೇಟರ್ ಬೆಂಗಳೂರು ಆಡಳಿತ ವ್ಯವಸ್ಥೆಯಿಂದ ಕೆಂಪೇಗೌಡರ ಬೆಂಗಳೂರಿಗೆ ಯಾವುದೇ ಧಕ್ಕೆ ಇಲ್ಲ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದ್ದಾರೆ.

ಗುರುವಾರ ಕೆಪಿಸಿಸಿ ಕಚೇರಿಗೆ ಭೇಟಿ ನೀಡಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಂದ ಅಹವಾಲುಗಳನ್ನು ಸ್ವೀಕರಿಸಿದ ಬಳಿಕ ಮಾತನಾಡಿದ ಅವರು, ಗ್ರೇಟರ್ ಬೆಂಗಳೂರಿನಿಂದ ಕೆಂಪೇಗೌಡರ ಬೆಂಗಳೂರಿಗೆ ಧಕ್ಕೆಯಾಗುತ್ತದೆ ಎಂಬ ಆರೋಪಗಳಲ್ಲಿ ಹುರುಳಿಲ್ಲ. ಆಡಳಿತದ ದೃಷ್ಟಿಯಿಂದ ಗ್ರೇಟರ್ ಬೆಂಗಳೂರು ಆಡಳಿತ ಕಾಯ್ದೆ ರೂಪಿಸಲಾಗಿದೆಯೇ ಹೊರತು ಬೇರೆ ಯಾವುದೇ ಉದ್ದೇಶ ಇಲ್ಲ ಎಂದು ಸ್ಪಷ್ಟಪಡಿಸಿದರು.

ಗ್ರೇಟರ್ ಬೆಂಗಳೂರು ಅಸ್ತಿತ್ವಕ್ಕೆ ಬಂದ ಮೇಲೆ ಹೆಚ್ಚುವರಿ ಪಾಲಿಕೆಗಳನ್ನು ರಚಿಸಲಾಗುತ್ತದೆಯಾದರೂ ಅವುಗಳ ಹೆಸರು ಬೆಂಗಳೂರು ದಕ್ಷಿಣ, ಉತ್ತರ, ನಗರ ಎಂದೇ ಇರುತ್ತದೆಯೇ ಹೊರತು ಬದಲಾವಣೆ ಆಗುವುದಿಲ್ಲ. ಒಂದು ಪಾಲಿಕೆಯ ಆದಾಯವನ್ನು ಇನ್ನೊಂದು ಪಾಲಿಕೆಗೆ ವರ್ಗಾವಣೆ ಮಾಡುವುದಿಲ್ಲ. ಆರ್ಥಿಕವಾಗಿ ದುರ್ಬಲವಾದ ಪಾಲಿಕೆಗಳಿಗೆ ಸರ್ಕಾರದಿಂದ ಹೆಚ್ಚುವರಿ ನೆರವು ನೀಡಲಾಗುತ್ತದೆ ಎಂದು ತಿಳಿಸಿದರು.

Tags:
error: Content is protected !!