Mysore
21
scattered clouds
Light
Dark

ಕೆಎಎಸ್‌ ಪರೀಕ್ಷೆ: ಕನ್ನಡರಾಮಯ್ಯ ಅವರೇ ಮರು ಪರೀಕ್ಷೆ ನಡೆಸಲು ಆದೇಶಿಸಿ: ಬಿಜೆಪಿ

ಬೆಂಗಳೂರು: ಗೆಜೆಟೆಡ್‌ ಪ್ರೊಬೇಷನರಿ ಪೂರ್ವಭಾವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಅನುವಾದದಲ್ಲಿ ಉಂಟಾದ ಲೋಪದೋಷದಿಂದ ಕನ್ನಡ ಮಾಧ್ಯಮದ ಅಭ್ಯರ್ಥಿಗಳಿಗೆ ಮೋಸವಾಗಿದ್ದು, ಮರು ಪರೀಕ್ಷೆ ನಡೆಸುವಂತೆ ಬಿಜೆಪಿಯು ರಾಜ್ಯ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಕರ್ನಾಟಕ ಬಿಜೆಪಿ, ಕೆಎಎಸ್‌ ಪರೀಕ್ಷೆಗಳನ್ನು ಮುಂದೂಡಬೇಕು ಎಂಬ ಆಗ್ರಹ ಮೊದಲಿನಿಂದಲೂ ಕೇಳಿ ಬರುತ್ತಿದ್ದರೂ ಭಂಡ ಕಾಂಗ್ರೆಸ್‌ ಸರ್ಕಾರ ಅದಕ್ಕೆ ಏಕೆ ಕಿವಿಗೊಡಲಿಲ್ಲ ಎಂಬುದಕ್ಕೆ ಸದ್ಯ ಕೆಎಎಸ್‌ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮಗಳೇ ಸಾಕ್ಷಿ.

ಸಂಧಿ-ಸಮಾಸದ ಬಗ್ಗೆ ಭಾಷಣ ಮಾಡುವ, ಕನ್ನಡರಾಮಯ್ಯ ಎಂದು ವಂದಿಮಾಗಧರಿಂದ ಕರೆಸಿಕೊಳ್ಳುವ ಸಿಎಂ ಸಿದ್ದರಾಮಯ್ಯನವರೆ, ಪ್ರಶ್ನೆ ಪತ್ರಿಕೆಯ 70 ಪ್ರಶ್ನೆಗಳ ಪೈಕಿ 60 ಪ್ರಶ್ನೆಗಳು ತಪ್ಪಿನಿಂದಲೇ ತುಂಬಿದ್ದವು. ಸಹಸ್ರಾರು ಅಭ್ಯರ್ಥಿಗಳ ಜೀವನದ ಜೊತೆ ಚೆಲ್ಲಾಟವಾಡುವ ಬದಲು, ಕೂಡಲೇ ಕೆಎಎಸ್‌ ಮರು ಪರೀಕ್ಷೆಗೆ ಆದೇಶ ನೀಡಬೇಕು ಎಂದು ಆಗ್ರಹಿಸಿದೆ.