Mysore
19
broken clouds

Social Media

ಶುಕ್ರವಾರ, 27 ಡಿಸೆಂಬರ್ 2024
Light
Dark

ಕನ್ನಡಿಗರ ತೆರಿಗೆ ಹಣ ಬೆಳಗಾವಿ ಅಧಿವೇಶನದಲ್ಲಿ ಪೋಲು: ಜೆಡಿಎಸ್‌ ಕಿಡಿ

ಬೆಂಗಳೂರು: ಕಾಂಗ್ರೆಸ್‌ ಸರ್ಕಾರ, ತಮ್ಮ ವರಿಷ್ಠರನ್ನು ಮೆರೆಸಲು ಗುಲಾಮರಂತೆ ನಡೆದುಕೊಂಡು ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡಿ ಬೆಳಗಾವಿ ಅಧಿವೇಶನ ನಡೆಸುತ್ತಿದೆ ಇದಕ್ಕೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ ಎಂದು ಜೆಡಿಎಸ್‌ ಕಿಡಿಕಾರಿದೆ.

ಈ ಕುರಿತು ಸಾಮಾಜಿಕ ಜಾಲತಾಣವಾದ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಜೆಡಿಎಸ್‌ ಪಕ್ಷವೂ, ಕನ್ನಡಿಗರ ತೆರಿಗೆ ಹಣದಲ್ಲಿ ಕಾಂಗ್ರೆಸ್‌ ಸಮಾವೇಶದ ಜಾಹೀರಾತು ಕೊಟ್ಟು ಬಿಟ್ಟಿ ಪ್ರಚಾರ ಪಡೆಯುತ್ತಿರುವ ಕಾಂಗ್ರೆಸ್‌ ಪಕ್ಷಕ್ಕೆ ಮತ್ತು ಕಾಂಗ್ರೆಸ್ಸಿಗರಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದೆ.

ಬೆಳಗಾವಿಯ ಕಾಂಗ್ರೆಸ್‌ ಅಧಿವೇಶನದ ಶತಮಾನೋತ್ಸವ ಸಮಾರಂಭ ಇದಕ್ಕೆ ಮತ್ತೊಂದು ಉದಾಹರಣೆ. ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹೆಸರಲ್ಲಿ ಕಾಂಗ್ರೆಸ್‌ ಪಕ್ಷದ ಜಾತ್ರೆ ನಡೆಯುತ್ತಿದೆ ಅಷ್ಟೇ. ಕಾಂಗ್ರೆಸ್‌ ವರಿಷ್ಠರನ್ನು ಮೆರೆಸಲು ರಾಜ್ಯ ಕಾಂಗ್ರೆಸ್‌ ಸರ್ಕಾರ ಗುಲಾಮರಂತೆ ನಡೆಯುತ್ತಿದೆ. ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡುವುದಕ್ಕೆ ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ “ಸ”ಮಜಾವಾದಿ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದೆ.

ಹಾಲಿನ ದರ ಏರಿಕೆ- ಜೆಡಿಎಸ್‌ ವಾಗ್ದಾಳಿ

ಬೆಲೆ ಏರಿಕೆಯ ಕಾಂಗ್ರೆಸ್‌ ಸರ್ಕಾರ ಮತ್ತೆ ರಾಜ್ಯದ ಜನರ ಜೇಬಿಗೆ ಕನ್ನ ಹಾಕಲು ಸಿದ್ಧವಾಗಿದೆ. ಮತ್ತೊಮ್ಮೆ ಹಾಲಿನ ದರವನ್ನು 5 ರೂ. ಹೆಚ್ಚಿಸಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮುಂದಾಗಿದೆ ಎಂದು ವಾಗ್ದಾಳಿ ನಡೆಸಿದೆ.

ಜುಲೈ ತಿಂಗಳಿನಲ್ಲಿ 2 ರೂ. ಏರಿಕೆ ಮಾಡಿ 50 ML ಹೆಚ್ಚುವರಿ ನೀಡುತ್ತಿದ್ದ ಹಾಲನ್ನು ಕಡಿತಗೊಳಿಸುವ ಮೂಲಕ ದರ ಪರಿಷ್ಕರಣೆ ಮಾಡುತ್ತಿದೆ. ಅಲ್ಲದೇ ಅವೈಜ್ಞಾನಿಕ ಗ್ಯಾರಂಟಿಯಿಂದ ದಿವಾಳಿಯಾಗಿರುವ ಖಾಲಿ “ಕೈ” ಸರ್ಕಾರ ಒಂದು ಕೈಯಲ್ಲಿ ಕೊಟ್ಟು, ಮತ್ತೊಂದು ಕೈಯಲ್ಲಿ ಕಿತ್ತುಕೊಳ್ಳುವುದನ್ನು ಕರಗತ ಮಾಡಿಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

ಹಾಲು ಉತ್ಪಾದಕರ ಬಾಕಿ ಉಳಿಸಿಕೊಂಡಿರುವ 9 ತಿಂಗಳ ಹಾಲಿನ ಪ್ರೋತ್ಸಾಹ ಧನ ಕೊಡಲು ಯೋಗ್ಯತೆ ಇಲ್ಲದ ರೈತವಿರೋಧಿ ಸರ್ಕಾರ. ಜನರಿಂದಲೂ ಸುಲಿಗೆ ಮಾಡಿ, ರೈತರಿಗೂ ಕೊಡದೆ ವಂಚಿಸುತ್ತಿರುವ ವಚನ ಭ್ರಷ್ಟ ಕಾಂಗ್ರೆಸ್‌ ಸರ್ಕಾರ ಲೂಟಿ ಹೊಡೆಯಲು ಮತ್ತೆ ದರ ಏರಿಸಲು ಹೊರಟಿದೆ ಎಂದು ಕಿಡಿಕಾರಿದೆ.

 

Tags: