ಬೆಂಗಳೂರು : ಶಿರೂರಿನ ಗುಡ್ಡ ಕುಸಿತ ಪ್ರದೇಶಕ್ಕೆ ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಭೇಟಿ ನೀಡಿರುವ ವಿಚಾರ ಸುದ್ದಿಯಾಗದಂತೆ ತಡೆಯಲು ಸರ್ಕಾರದಿಂದ ಯತ್ನಿಸಲಾಗಿದೆ ಎಂದು ಜೆಡಿಎಸ್ ಆರೋಪ ಮಾಡಿದೆ.
ಈ ವಿಚಾರವಾಗಿ ಎಕ್ಸ್ ನಲ್ಲಿ ಜೆಡಿಎಸ್ ಅಭಿಪ್ರಾಯ ಹಂಚಿಕೊಂಡಿದ್ದು, ದುರಂತ ನಡೆದು ಇಷ್ಟು ದಿನವಾದರೂ ಶಿರೂರಿಗೆ ನೀವಾಗಲಿ, ನಿಮ್ಮ ಸರ್ಕಾರದ ಯಾವುದೇ ಸಚಿವರಾಗಲಿ ಸ್ಥಳಕ್ಕೆ ಭೇಟಿ ನೀಡಿಲ್ಲ. ಸಂತ್ರಸ್ತರ ಸಂಕಷ್ಟ ಆಲಿಸಿಲ್ಲ. ಆದರೆ ಅವರು ಎಚ್ ಡಿಕೆ ಅವರು ಶಿರೂರು ಗ್ರಾಮಕ್ಕೆ ಭೇಟಿ ನೀಡುವ ವೇಳೆಯೂ ನಿಮ್ಮ ಸರ್ಕಾರ ಈ ಸೇಡಿನ ರಾಜಕೀಯ ಥರವೇ..? ಇದು ಸಿದ್ದರಾಮಯ್ಯರ ಕೀಳುಮಟ್ಟದ ರಾಜಕೀಯ ಎಂದು ಆಕ್ಷೇಪ ವ್ಯಕ್ತಪಡಿಸಿದೆ.
ಅಲ್ಲದೆ ಏನೇ ಇದ್ದರೂ ಎಚ್ ಡಿಕೆ ಪ್ರಚಾರಕ್ಕೆ ಶಿರೂರಿಗೆ ಭೇಟಿ ನೀಡುತ್ತಿಲ್ಲ. ಜಿಲ್ಲಾಡಳಿತವನ್ನ ಬಳಸಿ ಮಾಧ್ಯಮದವರನ್ನು ತಡೆದ ಮಾತ್ರಕ್ಕೆ ಕುಮಾರಸ್ವಾಮಿ ಅವರ ಭೇಟಿ ನಿಲ್ಲಿಸಲು ಸಾಧ್ಯವೇ..? ಸಂತ್ರಸ್ಥರ ಕಷ್ಟ ಆಲಿಸುವುದನ್ನ ತಡೆಯಲು ಸಾಧ್ಯವೇ ಎಂದು ಸಿಎಂ ವಿರುದ್ಧ ಜೆಡಿಎಸ್ ಆಕ್ರೋಶ ವ್ಯಕ್ತಪಡಿಸಿದೆ.





