Mysore
17
clear sky

Social Media

ಶನಿವಾರ, 20 ಡಿಸೆಂಬರ್ 2025
Light
Dark

ಕಾಂಗ್ರೆಸ್‌ ಸರ್ಕಾರದ ದುರಾಡಳಿತಕ್ಕೆ ಲಂಚವೇ ಇಂಧನ: ಜೆಡಿಎಸ್‌ ಕಿಡಿ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರದ ದುರಾಡಳಿತ ಯಂತ್ರಕ್ಕೆ ಲಂಚವೇ ಇಂಧನ ಎಂದು ಜೆಡಿಎಸ್‌ ಪಕ್ಷ ಕಿಡಿಕಾರಿದೆ.

ಈ ಕುರಿತು ಸಾಮಾಜಿಕ ಮಾಧ್ಯಮ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿರುವ ಅವರು, CM 30% + DCM 30% = 60% ಕಾಂಗ್ರೆಸ್‌ ಸರ್ಕಾರ. ಸರ್ಕಾರಿ ಇಲಾಖೆಗಳಲ್ಲಿ 60% ಕಮಿಷನ್‌ಗೆ “ಕೈ” ಜೋಡಿಸಿದ ಕಾಂಗ್ರೆಸ್‌” ಸರ್ಕಾರ ಎಂದು ಆರೋಪಿಸಿದೆ.

ಕರ್ನಾಟಕದಲ್ಲಿ ದುಷ್ಟ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೂ ಪರ್ಸಂಟೇಜ್‌ ವ್ಯವಹಾರದ ಮೇಲೆ ಕೆಲಸ ಕಾರ್ಯಗಳು ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ ಸರ್ಕಾರದ ದುರಾಡಳಿತ ಯಂತ್ರಕ್ಕೆ “ಲಂಚವೇ ಇಂಧನ”ವಾಗಿ ಬಿಟ್ಟಿದೆ. ಭ್ರಷ್ಟ ಮುಖ್ಯಮಂತ್ರಿ, ಭ್ರಷ್ಟ ಸಚಿವರುಗಳು ವಿಧಾನಸೌಧದಲ್ಲೇ “ಲಂಚದ ಕೊಠಡಿ ತೆರೆದಿದ್ದು, ಅಲ್ಲಿಂದಲೇ 60% ಕಮಿಷನ್‌ ವಸೂಲಿ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ ಎಂದು ವಾಗ್ದಾಳಿ ನಡೆಸಿದೆ.

ರಾಜ್ಯದಲ್ಲಿ ದುಷ್ಟ ಕಾಂಗ್ರೆಸ್‌ ಸರ್ಕಾರದಿಂದ ಅರಾಜಕತೆ ತಾಂಡವವಾಡುತ್ತಿದ್ದು, ಸರ್ಕಾರಿ ಇಲಾಖೆಗಳಲ್ಲಿ ಭ್ರಷ್ಟಾಚಾರದ ಕೂಪಗಳಾಗಿದೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಮತ್ತು ನವಜಾತ ಶಿಶುಗಳ ಮಾರಣ ಹೋಮ ನಡೆಯುತ್ತಿದೆ. ಆದರೆ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ರ್ಕಾರ ಮಾತ್ರ ಕುಂಭಕರ್ಣ ನಿದ್ದೆಯಲ್ಲೇ ಕಾಲಹರಣ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.

Tags:
error: Content is protected !!