Mysore
25
haze

Social Media

ಬುಧವಾರ, 28 ಜನವರಿ 2026
Light
Dark

ಯತ್ನಾಳ್‌ ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ: ಪ್ರಹ್ಲಾದ್ ಜೋಶಿ

ದಾವಣಗೆರೆ: ಬಿಜೆಪಿ ಪಕ್ಷದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರು ತಮ್ಮದೇ ಪಕ್ಷ ನಾಯಕರು ಹಾಗೂ ರಾಜ್ಯಾಧ್ಯಕ್ಷರ ವಿರುದ್ಧ ಪದೇ-ಪದೇ ಬಹಿರಂಗ ಹೇಳಿಕೆಗಳನ್ನು ನೀಡುತ್ತಾ ಬರುತ್ತಿದ್ದು, ಮಾಜಿ ಸಿಎಂ ಬಿ.ಎಸ್‌ ಯಡಿಯೂರಪ್ಪ ಅವರ ಅಧಿಕಾರಾವಧಿಯಲ್ಲಿ ಕೊವಿಡ್‌ ಸಂದರ್ಭದಲ್ಲಿ ೪೦ ಸಾವಿರ ಕೋಟಿ ರೂ ಹಗರಣ ನಡೆದಿದೆ ಮತ್ತು ಇತ್ತೀಚೆಗೆ ನಡೆದ ಬಿಜೆಪಿ ಪದಾಧಿಕಾರಿಗಳ ಪಟ್ಟಿಯಲ್ಲಿ ಯಡಿಯೂರಪ್ಪ ಬಣದವರಿಗೆ ಮಾತ್ರ ಸ್ಥಾನ ನೀಡಲಾಗಿದೆ ಎಂದು ದೂರಿದ್ದರು.

ಇದರ ಬೆನ್ನಲ್ಲೇ ಕೇಂದ್ರ ಸಚಿವ ಪ್ರಹ್ಲಾದ್‌ ಜೋಷಿ ಅವರು ಯತ್ನಾಳ್‌ ಆರೋಪಗಳ ಬಗ್ಗೆ ಮಾತನಾಡಿದ್ದು, ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಯತ್ನಾಳ್‌ ಅವರನ್ನು ಕರೆದು ಮಾತನಾಡುವ ಕೆಲಸವನ್ನು ರಾಷ್ಟ್ರೀಯ ಅಧ್ಯಕ್ಷರು ಮಾಡುತ್ತಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯಾರಿಗಾದರೂ ದೂರು-ದುಮ್ಮಾನಗಳಿದ್ದರೆ, ರಾಜ್ಯಾಧ್ಯಕ್ಷರು, ರಾಷ್ಟ್ರಾಧ್ಯಕ್ಷರ ಜೊತೆ ಮಾತನಾಡಿ, ಅದನ್ನು ಬಿಟ್ಟು ಪಕ್ಷದ ವಿರುದ್ಧ ಬಹಿರಂಗ ಹೇಳಿಕೆ ನೀಡುವುದು ಸರಿಯಲ್ಲ. ಬಿಜೆಪಿಯ ಹಿತಕಾಯುವವರು ತಮ್ಮ ಬಹಿರಂಗ ಹೇಳಿಕ ನೀಡುವುದು ತಕ್ಷಣವೇ ನಿಲ್ಲಿಸಬೇಕು. ರಾಜ್ಯಾಧ್ಯಕ್ಷರ ನೇಮಕವನ್ನು ರಾಷ್ಟ್ರೀಯ ಅಧ್ಯಕ್ಷರು, ವರಿಷ್ಠರು, ಪ್ರಧಾನಿ ಮೋದಿ ಅವರು ಚರ್ಚೆ ಮಾಡಿಯೇ ಆಯ್ಕೆ ಮಾಡಿರುವುದು. ಇದು ರಾಷ್ಟ್ರೈ ಘಟಕದ ನಿರ್ಣಯ. ನಿಮಗೆ ಎಲ್ಲಾದರೂ ತಪ್ಪುಗಳು ಕಂಡುಬಂದಲ್ಲಿ ಹೈಕಮಾಂಡ್‌ ಭೇಟಿಯಾಗಿ ಅದುಬಿಟ್ಟು ಬಹಿರಂಗ ಹೇಳಿಕೆ ಸರಿಯಲ್ಲ ಎಂದು ಸೂಚನೆ ನೀಡಿದ್ದಾರೆ.

ಸಿಎಂ ಸಿದ್ದರಾಮಯ್ಯ ಬಿಜೆಪಿ ಸರ್ಕಾರವನ್ನು ಬುರುಡೆ ಸರ್ಕಾರ ಎಂದು ಟೀಕಿಸಿದ ಬಗ್ಗೆ, ೧೯೭೧ ರಿಂದ ಗರಿಬಿ ಹಟಾವೋ ಎಂದು ಹೇಳಿದವರು ನೀವು, ಕೇಂದ್ರದಲ್ಲಿ ಸರ್ಕಾರ ಹಲವಾರು ವರ್ಷಗಳು ಕಾಂಗ್ರೆಸ್‌ ಆಡಳಿತ ನಡೆಸಿದರು ಸಹಾ ಒಂದು ಗ್ಯಾಸ್‌ ನೀಡಲು ಆಗಿಲ್ಲ. ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಗ್ಯಾಸ್‌ ಸಂಪರ್ಕಕ್ಕೆ ಹರ ಸಾಹಸ ಪಡುವ ಸ್ಥಿತಿಯಿತ್ತು. ೧೯೬೦ ರಿಂದ ಇಲ್ಲಿಯವರೆಗೆ ನರೇಂದ್ರ ಮೋದಿ ಅವರು ಅಧಿಕಾರಕ್ಕೆ ಬರುವವರೆಗೂ ನಮ್ಮ ದೇಶದಲ್ಲಿ ಸೂರು ಇಲ್ಲದವರಿಗೆ ಸೂರು ಎಂದು ಹೇಳಿಕೊಂಡೆ ಬಂದಿದ್ದಾರೆ. ಇಂದಿರಾ ಆವಾಸ್‌ ಯೋಜನೆಯಡಿ ಮೂರು ಕೋಟಿ ಮೂವತ್ತು ಲಕ್ಷ ಮನೆಗಳನ್ನು ಕೊಟ್ಟಿದ್ದೇವೆ ಎಂದು ಲೆಕ್ಕ ಕೊಟ್ಟಿದ್ದಾರೆ.

ಆದರೆ ಪ್ರಧಾನಿ ಮೋದಿ ಆಡಳಿತದಲ್ಲಿ ಕಳೆದ ವರ್ಷದಲ್ಲಿ ನಾಲ್ಕು ಕೋಟಿ ಮನೆಗಳನ್ನು ನಾವು ಕೊಟ್ಟಿದ್ದೇವೆ ಸ್ವಾಮಿ. ಈಗ ಹೇಳಿ ಯಾರದ್ದು ಬುರುಡೆ ಸರ್ಕಾರ ಎಂದು, ಸಿಎಂ ಸಿದ್ದರಾಮಯ್ಯ ಅವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ತಮಮ್‌ ವೈಫಲ್ಯಗಳನ್ನು ಮುಚ್ಚಿಹಾಕಲು ಸಿಎಂ ಈ ರೀತಿಯ ಹೇಳಿಕೆಗಳನ್ನು ಕೊಡುತ್ತಾರೆ ಎಂದು ಟೀಕಿಸಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!