ಉತ್ತರ ಕನ್ನಡ : ಉತ್ತರಕನ್ನಡ ಜಿಲ್ಲೆಯಾದ್ಯಂತ ವರುಣ ಆರ್ಭಟ ಜೋರಾಗಿದ್ದು, ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಿರಂತರ ಮಳೆಯಿಂದಾಗಿ ಶರಾವತಿ, ಗುಂಡಬಾಳ, ಕಾಳಿ ನದಿಗಳು ತುಂಬಿ ಹರಿಯುತ್ತಿದೆ. ಶರಾವತಿ ಹಾಗೂ ಗುಂಡಬಾಳ ನದಿ ತೀರದ ಪ್ರದೇಶದಲ್ಲಿ ಪ್ರವಾಹ ಉಂಟಾಗಿದ್ದು,ಕಡತೋಕ, ಬಾಸ್ಕೇರಿ, ಹಾಡಗೇರಿ ಸೇರಿ ಹಡಿನಬಾಳ ಗ್ರಾಮಕ್ಕೆ ಜಲದಿಗ್ಬಂಧನವಾಗಿದೆ.
ಭಾರೀ ಮಳೆಯಿಂದಾಗಿ ತೋಟ, ಗದ್ದೆಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳ ನಾಶವಾಗಿ ರೈತರು ಕಂಗಾಲಾಗಿ ಹೋಗಿದ್ದಾರೆ. ಇನ್ನು ಕೆಲವು ಗ್ರಾಮದಲ್ಲಿ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿರುವ ವಸ್ತುಗಳೆಲ್ಲವೂ ನೀರಿನಲ್ಲಿ ಮುಳುಗಡೆಯಾಗಿದೆ.

ಇನ್ನು ಹೊನ್ನಾವರ, ಕುಮಟಾ ತಾಲೂಕಿನಲ್ಲಿ ಭಾರೀ ಮಳೆಯಿಂದ ಪ್ರವಾಹವಾಗಿದೆ. ಹೊನ್ನಾವರ ತಾಲೂಕಿನ ನದಿಗಳು ಉಕ್ಕಿಹರಿಯುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಎನ್ ಡಿಆರ್ ಎಫ್ ತಂಡ ಜಿಲ್ಲೆಯಲ್ಲಿಯೇ ಬೀಡುಬಿಟ್ಟಿದೆ.





