ಶಬರಿಮಲೆ: ಶಬರಿಮಲೆ ಮಂಡಲ ಕಾಲದ ಯಾತ್ರೆ ಕೈಗೊಳ್ಳುವ ಭಕ್ತರಿಗೆ ನವೆಂಬರ್.1ರಿಂದ ಆನ್‌ಲೈನ್ ಬುಕ್ಕಿಂಗ್ ಆರಂಭಿಸಲಾಗಿದೆ.
ಒಂದು ದಿನದಲ್ಲಿ 70,000 ಭಕ್ತರಿಗೆ ಆನ್‌ಲೈನ್ ಬುಕ್ಕಿಂಗ್ ಮತ್ತು 20,000 ಭಕ್ತರಿಗೆ ಸ್ಪಾಟ್ ಬುಕ್ಕಿಂಗ್ ಮೂಲಕ ಅಯ್ಯಪ್ಪಸ್ವಾಮಿ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ.
ಪಂಪಾದಲ್ಲಿ ಏಕಕಾಲದಲ್ಲಿ 10,000 ಜನರಿಗೆ ವಿಶ್ರಾಂತಿ ಸ್ಥಳಾವಕಾಶ ಕಲ್ಪಿಸಲು 10 ಜರ್ಮನ್ ಟೆಂಟ್ ಸಿದ್ಧಪಡಿಸಲು ತೀರ್ಮಾನ ಕೈಗೊಳ್ಳಲಾಗಿದೆ.
ಮಂಡಲ ಉತ್ಸವಕ್ಕಾಗಿ ನವೆಂಬರ್.16ರಂದು ಸಂಜೆ 5 ಗಂಟೆಗೆ ಶಬರಿಮಲೆ ದೇವಾಲಯ ತೆರೆಯಲಾಗುವುದು. ಮಂಡಲ ಪೂಜೆ ಮುಗಿದ ನಂತರ ಡಿಸೆಂಬರ್.27ರಂದು ರಾತ್ರಿ ದೇವಾಲಯ ಮುಚ್ಚಲಾಗುವುದು. ಮಕರ ಜ್ಯೋತಿ ಉತ್ಸವಕ್ಕೆ ಡಿಸೆಂಬರ್.30ರಂದು ದೇವಾಲಯ ತೆರೆಯಲಾಗುವುದು.





