Mysore
19
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕುಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ: ಸಚಿವ ಪರಮೇಶ್ವರ್‌ ಸ್ಪಷ್ಟನೆ

Leadership change is just a political farce G. Parameshwara

ಬೆಂಗಳೂರು: ಹೊಸ ವರ್ಷಾಚರಣೆ ವೇಳೆ ಡ್ರಿಂಕ್ಸ್‌ ಮಾಡಿದ ಎಲ್ಲರನ್ನೂ ಮನೆಗೆ ಕರೆದುಕೊಂಡು ಹೋಗಿ ಬಿಡಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಬೆಂಗಳೂರಿನಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತುಂಬಾ ಕುಡಿದಿರುವವರು, ನಡೆಯಲು ಆಗದಿರುವವರನ್ನು ವಿಶ್ರಾಂತಿ ಸ್ಥಳಕ್ಕೆ ಬಿಡುತ್ತೇವೆ. ಕೆಲವರು ಪ್ರಜ್ಞೆ ಇರದ ಮಟ್ಟಕ್ಕೆ ಹೋಗಿ ಬಿಡ್ತಾರೆ. 15 ಕಡೆ ರೆಸ್ಟಿಂಗ್‌ ಪ್ಲೇಸ್‌ ಮಾಡಿದ್ದೇವೆ. ನಶೆ ಇಳಿಯುವವರೆಗೂ ಇಟ್ಟುಕೊಂಡು ನಂತರ ಕಳುಸುತ್ತೇವೆ ಎಂದು ತಿಳಿಸಿದರು.

ಇನ್ನು ಬಾರ್‌, ಪಬ್‌ ಓಪನ್‌ ಇಡಲು ಸಮಯ ನಿಗದಿ ಮಾಡಲಾಗಿದೆ. ಟೈಮಿಂಗ್‌ ಪ್ರಕಾರ ಬಾರ್‌ ಮುಚ್ಚಬೇಕು. ರಾತ್ರಿ ಒಂದು ಗಂಟೆಗೆ ಎಲ್ಲಾ ಬಾರ್‌ಗಳನ್ನು ಮುಚ್ಚಬೇಕು. ಮುಚ್ಚದೇ ಇದ್ದರೆ ಕೇಸ್‌ ಹಾಕಲಾಗುವುದು ಎಂದು ತಿಳಿಸಿದರು.

Tags:
error: Content is protected !!