Mysore
28
scattered clouds

Social Media

ಗುರುವಾರ, 11 ಡಿಸೆಂಬರ್ 2025
Light
Dark

ನಾನು ಸಚಿವರ ಜೊತೆ ಹೈಕಮಾಂಡ್‌ ಭೇಟಿ ಮಾಡಲ್ಲ: ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟನೆ

ಬೆಂಗಳೂರು: ನನ್ನ ನೇತೃತ್ವದಲ್ಲಿ ಹೈಕಮಾಂಡ್‌ ನಾಯಕರನ್ನು ಸಚಿವರ ನಿಯೋಗ ಭೇಟಿ ಮಾಡುತ್ತಾರೆ ಎಂಬ ಸುದ್ದಿ ಸುಳ್ಳು ಎಂದು ಗೃಹ ಸಚಿವ ಜಿ.ಪರಮೇಶ್ವರ್‌ ಸ್ಪಷ್ಟಪಡಿಸಿದ್ದಾರೆ.

ಈ ಬಗ್ಗೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನನಗೆ ಈ ಬಗ್ಗೆ ಗೊತ್ತಿಲ್ಲ. ಯಾರು ಇಂತಜ ಸುದ್ದಿ ಹುಟ್ಟುಹಾಕುತ್ತಾರೆ ಎಂದು ಗೊತ್ತಾಗುತ್ತಿಲ್ಲ. ನನ್ನ ನಾಯಕತ್ವದಲ್ಲಿ ಸಚಿವರುಗಳು ದೆಹಲಿಗೆ ಹೋಗಿ ಹೈಕಮಾಂಡ್‌ ಭೇಟಿ ಆಗುತ್ತಾರೆ ಎಂದು ಸುದ್ದಿ ಬರುತ್ತಿದೆ. ನನಗೆ ಅದು ಗೊತ್ತಿಲ್ಲ. ಅದು ಯಾರು ಇದನ್ನು ಹೇಳಿದ್ರೋ ಅದು ನನಗೆ ಗೊತ್ತಿಲ್ಲ. ಪಕ್ಷದಲ್ಲಿ ಅಂತಹ ಯಾವುದೇ ಬೆಳವಣಿಗೆ ಇಲ್ಲ. ನಾನು ಯಾವುದೇ ನಿಯೋಗವನ್ನು ಹೈಕಮಾಂಡ್‌ ಬಳಿ ತೆಗೆದುಕೊಂಡು ಹೋಗುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.

ಇನ್ನು ಮುಂದುವರಿದು ಮಾತನಾಡಿದ ಅವರು, ನನ್ನ ನೇತೃತ್ವದಲ್ಲಿ ಹೈಕಮಾಂಡ್‌ ಭೇಟಿ ಮಾಡುವಂತಹ ಯಾವುದೇ ರಾಜಕೀಯ ಬೆಳವಣಿಗೆಯೂ ಇಲ್ಲ. ನಾನು ಮೊನ್ನೆಯೇ ಹೇಳಿದ್ದೇನೆ. ಇಲಾಖೆ ಕೆಲಸ ಇದ್ದಾಗ ದೆಹಲಿಗೆ ಹೋಗುತ್ತೇನೆ ಅಷ್ಟೇ ಎಂದು ಹೇಳಿದರು.

 

Tags:
error: Content is protected !!