Mysore
28
overcast clouds

Social Media

ಗುರುವಾರ, 18 ಡಿಸೆಂಬರ್ 2025
Light
Dark

ನನ್ನ ಕೊಲೆಗೆ ಹೊಂಚು ಹಾಕಿದ್ದಾರೆ; ಗಂಭೀರ ಆರೋಪ ಮಾಡಿದ ವಿದ್ಯಾಧರನಾಥ ಸ್ವಾಮೀಜಿ

ಹೆಸರಘಟ್ಟದ ಆದಿಚುಂಚನಗಿರಿ ಶಾಖಾ ಮಠದ ಸ್ವಾಮೀಜಿಗಳಾದ ಶ್ರೀ ವಿದ್ಯಾಧರನಾಥ ಸ್ವಾಮೀಜಿ ಅವರು ಮತ್ತಿಬ್ಬರು ಸ್ವಾಮೀಜಿಗಳ ಹೆಸರನ್ನು ಉಲ್ಲೇಖಿಸಿ ಕೊಲೆ ಹೊಂಚು ಹಾಕಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದಾರೆ.

ಕುಂಬಳಗೋಡಿನ ಪ್ರಕಾಶ್‌ನಾಥ್‌ ಸ್ವಾಮೀಜಿ ಹಾಗೂ ಶಿವಮೊಗ್ಗದ ಪ್ರಸನ್ನನಾಥ ಸ್ವಾಮೀಜಿಗಳು ತನ್ನ ಕೊಲೆಗೆ ಸಂಚು ರೂಪಿಸಿದ್ದಾರೆ, ಇದರ ಹಿಂದೆ ಇನ್ನೂ ಯಾರ ಕೈವಾಡವಿದೆ, ಇವರಿಗೆ ಇಷ್ಟು ಧೈರ್ಯ ಬರಬೇಕೆಂದರೆ ಇನ್ನೂ ಯಾವೆಲ್ಲಾ ದೊಡ್ಡ ಕೈಗಳಿವೆ ಎಂಬುದನ್ನು ನೋಡಬೇಕು ಎಂದು ಹೇಳಿಕೆ ನೀಡಿದ್ದಾರೆ. ಇದೆಲ್ಲಾ ದೊಡ್ಡವರಾದ ನಿರ್ಮಲಾನಂದನಾಥ ಶ್ರೀಗಳ ಗಮನಕ್ಕೂ ಸಹ ಬಂದಿದೆ ಎಂದೂ ಸಹ ಅವರು ತಿಳಿಸಿದ್ದು ಮಾದನಾಯಕನಹಳ್ಳಿ ಪೊಲೀಸ್‌ ಠಾಣೆಯಲ್ಲಿ ಜೀವ ಬೆದರಿಕೆ ದೂರನ್ನು ಸಹ ಕೊಟ್ಟಿದ್ದೆ ಎಂದು ಹೇಳಿದ್ದಾರೆ.

ಅಲ್ಲದೇ ಈ ಹಿಂದೆ ಗೃಹ ಸಚಿವರಾಗಿದ್ದ ಆರಗ ಜ್ಞಾನೇಂದ್ರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಸಹ ಈ ವಿಷಯವನ್ನು ತಿಳಿಸಲಾಗಿತ್ತು ಎಂದೂ ಸಹ ಅವರು ಹೇಳಿಕೊಂಡಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!