ಮಂಗಳೂರು: ಭಾರೀ ಮಳೆಗೆ ಮನೆಯೊಂದರ ಪಕ್ಕ ಅಪಾಯಕಾರಿ ಗುಂಡಿ ನಿರ್ಮಾಣವಾಗಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮದ ರಾಜಾರಾಂಪುರ ಕಾಲನಿಯಲ್ಲಿ ನಡೆದಿದೆ.
ಕಾಲನಿಯ ನಿವಾಸಿ ವಿಶೇಷ ಚೇತನ ಬಾಳಪ್ಪ ಎಂಬುವವರ ಮನೆ ಪಕ್ಕ ಸುಮಾರು ಒಂದು ಅಡಿ ಅಂತರದಲ್ಲೇ 15ರಿಂದ 20 ಅಡಿಗಳ ಆಳವಾದ ಅಪಾಯಕಾರಿ ಗುಂಡಿ ನಿರ್ಮಾಣವಾಗಿದ್ದು, ಗುಂಡಿ ಒಳಗಿನ ಸುರಂಗದಿಂದ ನೀರು ಉಕ್ಕಿ ಬರುತ್ತಿದೆ.
ನಿವಾಸಿ ಬಾಳಪ್ಪ ಮನೆ ಅಪಾಯದ ಹಂತದಲ್ಲಿದ್ದು, ಈ ಹಿನ್ನಲೆ ಮನೆಯವರನ್ನು ಜಿಲ್ಲಾಡಳಿತ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದೆ.