Mysore
22
mist

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ದರ್ಶನ್‌ಗೆ ರಾಜಾತಿಥ್ಯ ಬಗ್ಗೆ ಹೈಕೋರ್ಟ್‌ ನ್ಯಾಯಮೂರ್ತಿ ತನಿಖೆ ಮಾಡಬೇಕು : ರೇಣುಕಾಸ್ವಾಮಿ ತಂದೆ ಮನವಿ

ಬೆಂಗಳೂರು : ಪರಪ್ಪನ ಅಗ್ರಹಾರದಲ್ಲಿ ಕೊಲೆ ಆರೋಪಿ ದರ್ಶನ್‌ಗೆ ರಾಜಾತಿಥ್ಯ ನೀಡಿರುವ ಬಗ್ಗೆ ಸರ್ಕಾರ ತನಿಖೆಯಾಗಬೇಕು ಎಂದು ಮೃತ ರೇಣುಕಾಸ್ವಾಮಿ ತಂದೆ ಮನವಿ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೈಲಿನಲ್ಲಿ ದರ್ಶನ್‌ಗೆ ಸಿಗುತ್ತಿರುವ ರಾಜಾತಿಥ್ಯದ ಬಗ್ಗೆ ಸರ್ಕಾರ ಸೂಕ್ತ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.

ಈ ಬೆಳವಣಿಗೆಯಿಂದ ನಮಗೆ ತುಂಬಾ ನೋವಾಗಿದೆ. ನಮಗೆ ನ್ಯಾಯ ಸಿಗುವುದರ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ. ವಿಶೇಷವಾಗಿ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿಗಳಿಂದಲೇ ಈ ಬಗ್ಗೆ ತನಿಖೆಯಾಗಬೇಕು. ಇಲ್ಲವಾದರೆ ಈ ವಿಚಾರ ಮುಚ್ಚಿಹೋಗುತ್ತದೆ ಎಂದರು.

ಯಾರೇ ಆಗಲಿ,  ಜೈಲಿನಲ್ಲಿ ಇದ್ದವರು ಸಾಮಾನ್ಯರು. ಯಾರು ದೊಡ್ಡವರಲ್ಲ. ದರ್ಶನ್‌ ಕೂಡ ಕೊಲೆ ಆರೋಪಿ ಅವರಿಗೆ ಈ ರೀತಿಯ ಸೌಲಭ್ಯಗಳು ಸಿಗುತ್ತಿರುವುದು ಸರಿಯಲ್ಲ ಎಂದು ಮೃತ ರೇಣುಕಾಸ್ವಾಮಿ ತಂದೆ ಅಭಿಪ್ರಾಯ ವ್ಯಕ್ತಪಡಿಸಿದರು.

Tags:
error: Content is protected !!