Mysore
20
overcast clouds

Social Media

ಶನಿವಾರ, 08 ಆಗಸ್ಟ್ 2026
Light
Dark

ಸೈಬರ್‌ ವಂಚನೆ ಕೇವಲ ಆರ್ಥಿಕ ಅಪರಾಧವಲ್ಲ. ರಾಷ್ಟ್ರೀಯ ಭದ್ರತೆಗೆ ಸವಾಲು: ಅಮಿತ್‌ ಶಾ

ನವದೆಹಲಿ: ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಸೈಬರ್‌ ಅಪರಾಧಗಳ ವಿರುದ್ಧ ಕೇಂದ್ರ ಸರ್ಕಾರ ಸಮರ ಸಾರಿದೆ.

ಸೈಬರ್‌ ಭದ್ರತೆಯು ಈಗ ಕೇವಲ ಹಣದ ನಷ್ಟದ ವಿಷಯವಲ್ಲ. ಇದು ನೇರವಾಗಿ ದೇಶದ ಆಂತರಿಕ ಮತ್ತು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ವಿಷಯವಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಹೇಳಿದರು.

ದೆಹಲಿಯಲ್ಲಿ ನಡೆದ ಸೈಬರ್‌ ವಂಚನೆಗಳನ್ನ ಎದುರಿಸುವುದು ಮತ್ತು ಪರಿಸರ ವ್ಯವಸ್ಥೆಯನ್ನು ಧ್ವಂಸಗೊಳಿಸುವುದು ಎಂಬ ಸಿಬಿಐ ರಾಷ್ಟ್ರೀಯ ಸಮ್ಮೇಳನದಲ್ಲಿ ಗೃಹ ಸಚಿವ ಅಮಿತ್‌ ಶಾ ಮಾತನಾಡಿದರು.

ದೇಶದಲ್ಲಿ ಸರಾಸರಿ ಪ್ರತಿ 37 ಸೆಕೆಂಡಿಗೆ ಒಬ್ಬ ವ್ಯಕ್ತಿ ಸೈಬರ್‌ ವಂಚನೆಗೆ ಬಲಿಯಾಗುತ್ತಿದ್ದಾನೆ ಎಂಬ ಆಘಾತಕಾರಿ ಮಾಹಿತಿಯನ್ನು ಅವರು ಹಂಚಿಕೊಂಡರು.

ಇಲ್ಲಿಯವರೆಗೆ ದೇಶದಲ್ಲಿ ಸುಮಾರು 20,000 ಕೋಟಿ ರೂಪಾಯಿ ವಂಚನೆಯಾಗಿದ್ದು, ಅದರಲ್ಲಿ 8189 ಕೋಟಿ ರೂಪಾಯಿಗಳನ್ನು ಫ್ರೀಜ್‌ ಮಾಡಲು ಅಥವಾ ಸಂತ್ರಸ್ತರಿಗೆ ಮರಳಿ ಕೊಡಿಸಲು ಸರ್ಕಾರ ಯಶಸ್ವಿಯಾಗಿದೆ ಎಂದು ಹೇಳಿದರು.

 

Tags:
error: Content is protected !!