Mysore
27
clear sky

Social Media

ಸೋಮವಾರ, 16 ಫೆಬ್ರವರಿ 2026
Light
Dark

ಎಚ್‌ಡಿಕೆ ಕನಸು ಕಾಣುವುದರಲ್ಲಿ ತಪ್ಪಿಲ್ಲ: ಡಿಕೆ ಟಾಂಗ್‌!

ಬೆಂಗಳೂರು: ಕುಮಾರಸ್ವಾಮಿಯರು ಕೇಂದ್ರದಲ್ಲಿ ಕೃಷಿ ಸಚಿವನಾಗುವ ಬಗ್ಗೆ ಹೇಳಿರುವುದನ್ನು ಗೇಲಿ ಮಾಡಿದ ಶಿವಕುಮಾರ್ ಕನಸು ಕಾಣುವುದರಲ್ಲಿ ತಪ್ಪಿಲ್ಲ ಅದರೆ, ಎನ್ ಡಿಎ ಅಧಿಕಾರಕ್ಕೆ ಬಂದರೆ ತಾನೆ ಅವರ ಕನಸು ನನಸಾಗೋದು ಎಂದರು.

ನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷಗಳಿಗೆ ಮತದಾರರ ಒಲವು ಗಳಿಸಲು ಯಾವುದೇ ವಿಷಯವಿರದ ಕಾರಣ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ಜನರು ಕಾಂಗ್ರೆಸ್‌ ಸರ್ಕಾರ ಆರ್ಥಿಕವಾಗಿ ಶಕ್ತಿ ತುಂಬುವ ಕೆಲಸ ಮಾಡಿದ್ದಾರೆ ಎಂದರು.

ಇನ್ನು ನಿನ್ನೇ ಸಿಎಂ ಸಿದ್ದರಾಮಯ್ಯ ಜೊತೆ ಅವರ ಕಾರ್‌ಗೆ ಅತ್ತಿದ್ದ ಯವಕನೊಬ್ಬನ ಬಳಿ ಗನ್‌ ಇದ್ದ ವಿಚಾರ ನಮಗೆ ಗೊತ್ತಿಲ್ಲ ಎಂದ ಡಿಸಿಎಂ, ಚುನಾವಣಾ ಹಿನ್ನಲೆ ಎರಡು ದಿನಗಳ ಪ್ರಚಾರಕ್ಕಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ಆಗಮಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಿಳಿಸಿದರು.

Tags:
error: Content is protected !!