Mysore
28
few clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ಕಲ್ಲೊಡೆದುಕೊಂಡಿದ್ದವರನ್ನು ಲೋಕಸಭೆಗೆ ಕಳುಹಿಸಿದರೆ ಇನ್ನೇನಾಗುತ್ತೆ; ಡಿಕೆ ಸುರೇಶ್‌ಗೆ ಹೆಚ್‌ಡಿಕೆ ಟಾಂಗ್‌

ಡಿಕೆ ಸುರೇಶ್‌ ಕೇಂದ್ರ ಸರ್ಕಾರ ದಕ್ಷಿಣ ಭಾರತದ ರಾಜ್ಯಗಳಿಗೆ ಸರಿಯಾಗಿ ಹಣ ನೀಡುತ್ತಿಲ್ಲ, ಇದರಿಂದ ಪ್ರತ್ಯೇಕ ರಾಷ್ಟ್ರದ ದನಿ ಎತ್ತಬೇಕಾದ ಅನಿವಾರ್ಯತೆ ಎದುರಾಗಿದೆ ಎಂದು ನೀಡಿದ್ದ ಹೇಳಿಕೆಗೆ ಸದ್ಯ ಎಲ್ಲೆಡೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಸ್ವತಃ ಕಾಂಗ್ರೆಸ್‌ ಪಕ್ಷದ ನಾಯಕರೇ ಡಿಕೆ ಸುರೇಶ್‌ ಹೇಳಿಕೆಗೆ ವಿರುದ್ಧವಾಗಿ ಮಾತನಾಡಿದ್ದು, ಇನ್ನುಳಿದ ಪಕ್ಷಗಳ ನಾಯಕರೂ ಸಹ ಚಾಟಿ ಬೀಸಿದ್ದಾರೆ. ಯಾವ ನಾಯಕರು ಯಾವ ರೀತಿ ಪ್ರತಿಕ್ರಿಯೆ ನೀಡಿದ್ದಾರೆ ಎಂಬ ಮಾಹಿತಿ ಈ ಕೆಳಕಂಡಂತಿದೆ.

ಹೆಚ್‌ಡಿ ಕುಮಾರಸ್ವಾಮಿ: ಕಲ್ಲೊಡೆದುಕೊಂಡು ಇದ್ದವರನ್ನು ಲೋಕಸಭೆಗೆ ಆರಿಸಿ ಕಳುಹಿಸಿದರೆ ಇನ್ನೇನಾಗುತ್ತೆ. ಇಲ್ಲಿ ಬಡ ಜನರನ್ನು ಲೂಟಿ ಮಾಡಿಕೊಂಡು ಸಾಕಷ್ಟು ಗುಡ್ಡೆ ಮಾಡಿದ್ದಾರೆ. ಅಂತಹವರನ್ನು ದೇಶ ಕಟ್ಟಲು ಲೋಕಸಭೆಗೆ ಕಳುಹಿಸಿದರೆ ಕಟ್ಟುತ್ತಾರಾ? ಅವರ ಸಾಮ್ರಾಜ್ಯ ಕಟ್ಟಿಕೊಳ್ಳುತ್ತಾರಷ್ಟೇ. ಇವರಿಂದ ಇನ್ನೇನು ನಿರೀಕ್ಷೆ ಮಾಡಲು ಸಾಧ್ಯ? ಸುರೇಶ್‌ ಅವರ ಹೇಳಿಕೆ ಬಾಲಿಶವಾಗಿದೆ” ಎಂದು ಹೇಳಿಕೆ ನೀಡಿದ್ದಾರೆ.

ಸಿದ್ದರಾಮಯ್ಯ: ʼಪ್ರತ್ಯೇಕ ದೇಶ ಕೇಳೋಕೆ ಆಗಲ್ಲ. ದೇಶ ಸಾರ್ವಭೌಮತೆ ಇರಬೇಕು. ನಮ್ಮದು ಫೆಡರಿಸಂ ದೇಶ. ನಮಗೆ ಸಿಗಬೇಕಾದ ಪಾಲು ಸಿಗುತ್ತಿಲ್ಲ. ನಮ್ಮ ರಾಜ್ಯದಿಂದ 4 ಲಕ್ಷ ಕೋಟಿ ತೆರಿಗೆ ಸಂಗ್ರಹ ಮಾಡುತ್ತೆ. ಆದರೂ ನಮಗೆ ಅನ್ಯಾಯ ಆಗುತ್ತಿದೆ. ಅಖಂಡ ಭಾರತವಾಗಿಯೇ ಇರಬೇಕು. ದಕ್ಷಿಣ ಭಾರತ, ಉತ್ತರ ಭಾರತ ಅಂತ ಇರಬಾರದು. ಅಖಂಡ ಭಾರತವಾಗಿಯೇ ಇರಬೇಕು. ಅಖಂಡ ಕರ್ನಾಟಕವಾಗಿಯೇ ಕರ್ನಾಟಕ ಇರಬೇಕುʼ ಎಂದು ಹೇಳಿದರು.

ಡಿಕೆ ಶಿವಕುಮಾರ್: ನಮ್ಮದು ಅಖಂಡ ಭಾರತ, ನಾನು ಪ್ರತ್ಯೇಕ ದೇಶ ಬೇಡಿಕೆ ಒಪ್ಪುವುದಿಲ್ಲ. ನಮ್ಮದು ಅಖಂಡ ಭಾರತ. ಹೀಗಾಗಿ ಅಖಂಡ ಭಾರತ ಇರಬೇಕು. ಆದರೆ ಡಿ.ಕೆ. ಸುರೇಶ್ ಅವರು ಹೇಳಿರುವುದು ಆ ಅರ್ಥದಲ್ಲಿ ಅಲ್ಲ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ