ಬೆಂಗಳೂರು: ಇಂದು (ಜೂನ್.9, ಭಾನುವಾರ) ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಇದರ ಬೆನ್ನಲ್ಲೇ ಸಂಭಾವ್ಯ ಕೇಂದ್ರ ಸಚಿವರ ಪ್ರಮಾಣವಚನ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರ ಹೆಸರು ಕೇಳಿಬಂದಿದೆ.
ಇತ್ತ ಇಡೀ ದೇವೇಗೌಡರ ಕುಟುಂಬ ದಹಲಿಯಲ್ಲಿ ಬೀಡುಬಿಟ್ಟಿದ್ದು, ತಾವು ಕೇಂದ್ರ ಸಚಿವರಾಗುವ ಬಗ್ಗೆ ಮೊದಲ ಬಾರಿಗೆ ಮಾತನಾಡಿದ್ದಾರೆ.
ಇದು ನನ್ನ ಗೆಲುವಲ್ಲ ಕರ್ನಾಟಕದ ಗೆಲುವು. ನರೇಂದ್ರ ಮೋದಿ ಅವರ ಜತೆಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿದ್ದು, ಅವರ ನಂಬಿಕೆ ಉಳಿಸಿಕೊಳ್ಳುವ ರೀತಿಯಲ್ಲಿ ಕೆಲಸ ಮಾಡುತ್ತೇನೆ. ಈ ಅವಕಾಶ ನೀಡಿದ ಮಂಡ್ಯ ಜನತೆಗೆ ನನ್ನ ಧನ್ಯವಾದಗಳು.
ನನಗೆ ಮಂತ್ರಿ ಸ್ಥಾನ ಸಿಕ್ಕರೇ ಜನರ ಪರವಾಗಿ ಕೆಲಸ ಮಾಡುತ್ತೇನೆ. ಕೃಷಿ ಸಚಿವ ಖಾತೆ ಸಿಕ್ಕರೇ ಬಹಳ ಸಂತೋಷ. ರೈತರ ಪರವಾಗಿ ಕೆಲಸ ಮಾಡುವ ಅವಕಾಶ ಸಿಕ್ಕಂತಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದರು.
ಇನ್ನು ಮೋದಿ ನೇತೃತ್ವದ ಸರ್ಕಾರದಿಂದ ರಾಜ್ಯದಲ್ಲಿ ಜೆಡಿಎಸ್‌ಗೆ ಪುನಶ್ಚೇತನ ಸಿಕ್ಕಿದೆ, ಕರ್ನಾಟಕದ ಜನತೆಗೆ ಪುನಶ್ಚೇತನ ಸಿಕ್ಕಂತಾಗಿದೆ ಎಂದು ಕುಮಾರಸ್ವಾಮಿ ಹೇಳಿದರು.





