Mysore
24
overcast clouds

Social Media

ಬುಧವಾರ, 08 ಏಪ್ರಿಲ 2026
Light
Dark

ಹಾಸನ: ಹಾಡಹಗಲೇ ಗುಂಡಿನ ದಾಳಿ: ಇಬ್ಬರ ಸಾವು

ಹಾಸನ: ಹಾಡಹಗಲೇ ಗುಂಡಿನ ದಾಳಿ ನಡೆದು, ಇಬ್ಬರು ಸಾವನ್ನಪ್ಪಿರುವ ಘಟನೆ ಹಾಸನದ ಹೊಯ್ಸಳ ಬಡಾವಣೆಯಲ್ಲಿ ನಡೆದಿದೆ.

ಹಾಸನದ ಶರಾಫತ್‌ ಅಲಿ(52) ಹಾಗೂ ಬೆಂಗಳೂರಿನ ಆಸೀಫ್‌(46) ಮೃತರು. ಇವರಿಬ್ಬರು ಶುಂಠಿ  ವ್ಯಾಪಾರಿಯಾಗಿದ್ದು, ಇತ್ತೀಚಿಗೆ ರಿಯಲ್‌ ಎಸ್ಟೇಟ್‌ ಉದ್ಯಮ ನಡೆಸುತ್ತಿದ್ದರು ಎನ್ನಲಾಗಿದೆ.

ಇವರಿಬ್ಬರೂ ಇಂದು(ಜೂ.20) ಹಾಸನದ ಹೊಯ್ಸಳ ನಗರಕ್ಕೆ ಬಂದಿದ್ದರು. ಶೂಟೌಟ್‌ಗೆ ರಿಯಲ್‌ ಎಸ್ಟೇಟ್‌ ಉದ್ಯಮವೇ  ಕಾರಣ ಎನ್ನಲಾಗಿದೆ. ಇನ್ನೂ ಗುಂಡಿನ ದಾಳಿ ಬಗ್ಗೆ ಸ್ಪಷ್ಟತೆ ಸಿಗಬೇಕಿದೆ.

ಸ್ಥಳಕ್ಕೆ ಹಾಸನ ಎಸ್‌ಪಿ ಮೊಹಮ್ಮದ್‌ ಸುಜೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆರಳಚ್ಚು ತಜ್ಞರು, ಎಫ್‌ಎಸ್‌ಎಲ್‌ ತಜ್ಞರಿಂದ ಪರಿಶೀಲನೆ ನಡೆಸಲಾಗಿದೆ. ಹಾಸನದ ಕೆಆರ್‌ ಪುರಂ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

 

Tags:
error: Content is protected !!