Mysore
28
moderate rain

Social Media

ಬುಧವಾರ, 25 ಜೂನ್ 2025
Light
Dark

ಅರಣ್ಯಾಧಿಕಾರಿಗಳಿಂದ ಚಿನ್ನದಂಗಡಿ ಮಾಲೀಕರ ಮೇಲೆ ದೌರ್ಜನ್ಯ : ಟಿ.ಎ. ಶರವಣ ಆಕ್ರೋಶ

ಬೆಂಗಳೂರು : ಹುಲಿ ಉಗುರು ವಿಚಾರವಾಗಿ ರಾಜ್ಯದ ಚಿನ್ನದ ಅಂಗಡಿಗಳ ಮಾಲೀಕರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಮಾಡ್ತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಚಿನ್ನದ ಅಂಗಡಿ ಮಾಲೀಕರಾದ ಟಿ.ಎ. ಶರವಣ ಆರೋಪ ಮಾಡಿದರು.

ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹುಲಿ ಉಗುರು ವಿಚಾರವಾಗಿ ಚಿನ್ನದ ಅಂಗಡಿಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದೌರ್ಜನ್ಯ ಮಾಡ್ತಾ ಇದ್ದಾರೆ. ನೋಟಿಸ್ ಕೊಡದೆ, ತಪಾಸಣೆ ನಡೆಸದೆ ವರ್ತೂರು ಸಂತೋಷ್ ಅವರನ್ನು ಅರೆಸ್ಟ್ ಮಾಡಿದ್ದು ಸರಿಯಲ್ಲ. ರಾಜ್ಯದಲ್ಲಿ ಎಷ್ಟೆಲ್ಲಾ ಸಮಸ್ಯೆಗಳಿವೆ, ಅದರ ಪರಿಹಾರಕ್ಕೆ ಸರ್ಕಾರ ಗಮನ ಹರಿಸೋಕೆ ಆಗ್ತಿಲ್ವ ಎಂದು ವಾಗ್ದಾಳಿ ನಡೆಸಿದರು.

ಯಾವ ವಿಚಾರವನ್ನು ಮುಚ್ಚಿಡೋಕ್ಕೆ ಹುಲಿ ಉಗುರು ವಿಷಯವನ್ನು ಹೈಲೈಟ್ ಮಾಡ್ತಾ ಇದ್ದೀರಾ? ಅಸಲಿ ಹುಲಿ ಉಗುರು ಧರಿಸೋ ಶಕ್ತಿ ಯಾರಿಗೂ ಇಲ್ಲ. ಹಸುವಿನ ಕೊಂಬು ಹಾಗೂ ಸಿಂತೆಟಿಕ್ ವಸ್ತುವಿನಿಂದ ಅಕ್ಕಸಾಲಿಗರಿಂದ ಮಾಡಿಸಿರೋದು. ಹುಲಿ ಉಗುರು ಅಷ್ಟೇನಾ, ಆನೆ ಕೂದಲೂ ಕಾಣಲ್ವಾ? ಆನೇ ಕೂದಲು, ಹುಲಿ ಉಂಗುರು ಎಂದು ನಾವು ಮಾರುತ್ತಿರುವುದು ಕಪ್ಪು ಪ್ಲಾಸ್ಟಿಕ್ ಪೈಪ್ ಪ್ರಾಣಿಗಳ ಬಗ್ಗೆ ಅಷ್ಟೊಂದು ಕಾಳಜಿ ಇದ್ರೆ ಮೊದಲು ಜನರಲ್ಲಿ ಜಾಗೃತಿ ಮೂಡಿಸಿ ಎಂದರು.

ಅರ್ಚಕರು, ರಾಜಕೀಯ ವ್ಯಕ್ತಿಗಳು, ಸಿನಿ ತಾರೆಯರ ಮೇಲೆ ದಾಳಿ ಮಾಡೋದು ಬಿಡಿ. ನಿಜ್ವಾಗ್ಲೂ ಯಾರ ಬಳಿ ಇದೆ ಅಂಥವರಿಗೆ ವಾಪಾಸ್ ಕೊಡೋಕೆ 2 ತಿಂಗಳು ಟೈಮ್ ಕೊಡಿ. ಅದನ್ನು ಬಿಟ್ಟು ಒಡವೆ ಅಂಗಡಿಗಳ ಮೇಲೆ ದಾಳಿ ಮಾಡಿ, ದಬ್ಬಾಳಿಕೆ ಮಾಡೋದು ಸರಿಯಲ್ಲ. ಹೀಗೆ ಮುಂದುವರಿದರೆ ನಾವು ಪ್ರತಿಭಟನೆಗೆ ಮುಂದಾಗ್ತಿವಿ ಎಂದು ಶರವಣ ಎಚ್ಚರಿಕೆ ನೀಡಿದರು.

ತುಮಕೂರಿನ ವಿಶ್ವಾಸ ಜ್ಯುಯಲರ್ಸ್ ಮೇಲೆ ನಿನ್ನೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಅಲ್ಲಿ ಮಾಲೀಕ ಇಲ್ಲದ ಕಾರಣಕ್ಕೆ, ಅವರ ಮನೆಗೆ ಕಳ್ಳನ ರೀತಿ ಹುಡುಕಿಕೊಂಡು ಹೋಗಿದ್ದಾರೆ. ನೋಟಿಸ್ ಕೊಟ್ಟು ತಪಾಸಣೆ ಬನ್ನಿ, ಬೇಡ ಅನ್ನಲ್ಲ. ಸರ್ಕಾರ ನೆಡೆಸುವ ಮಂತ್ರಿಗಳು ಮೊದಲು ಸರಿ ಇದ್ದಾರಾ ನೋಡಿಕೊಳ್ಳಿ. ಚಿಕ್ಕವರಿಗೆ ಒಂದು ನ್ಯಾಯ, ದೊಡ್ಡವರಿಗೆ ಮತ್ತೊಂದು ನ್ಯಾಯಾನಾ? ಕುಮಾರಸ್ವಾಮಿಯವರ ಮನೆಯಲ್ಲಿ ಇದ್ದ ಲಾಕೆಟ್ ನಕಲಿ. ಅದನ್ನು ನಾನೇ ಪರಿಶೀಲಿಸಿ ಅಧಿಕಾರಿಗಳಿಗೆ ಒಪ್ಪಿಸಿದ್ದೇನೆ ಎಂದು ಸ್ಪಷ್ಟನೆ ನೀಡಿದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!