Mysore
22
overcast clouds

Social Media

ಗುರುವಾರ, 19 ಡಿಸೆಂಬರ್ 2024
Light
Dark

ದೇಶದ ಸಂವಿಧಾನ ಸಂರಕ್ಷಣೆ, ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ಸ್ವಾಭಿಮಾನಿ ಸಮಾವೇಶ : ಸಚಿವ ಎಚ್‌.ಸಿ.ಮಹದೇವಪ್ಪ

ಹಾಸನ: ಶೋಷಿತ ವರ್ಗಗಳ ಒಕ್ಕೂಟ ಹಾಗೂ ಕೆಪಿಸಿಸಿ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್‌ 5 ರಂದು ನಡೆಯಲಿರುವ ಸ್ವಾಭಿಮಾನಿ ಸಮಾವೇಶವೂ ದೇಶದ ಸಂವಿಧಾನ ಸಂರಕ್ಷಣೆ, ಪ್ರಜಾಪ್ರಭುತ್ವದ ಬಲವರ್ಧನೆಗಾಗಿ ನಡೆಸುವ ಸಮಾವೇಶವಾಗಿದೆ ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್‌.ಸಿ.ಮಹದೇವಪ್ಪ ತಿಳಿಸಿದರು.

ಈ ಕುರಿತು ಹಾಸನದಲ್ಲಿ ಇಂದು(ನ.29) ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅವರು, ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಶೋಷಿತ ಸಮುದಾಯಗಳ ಒಕ್ಕೂಟದ ಜನರು ಹಾಸನದಲ್ಲಿ ಸ್ವಾಭಿಮಾನಿ ಸಮಾವೇಶ ಮಾಡಬೇಕೆಂದು ಮನವಿ ಮಾಡಿದ ಹಿನ್ನೆಲೆಯಲ್ಲಿ ಸಮಾವೇಶವನ್ನು ನಡೆಸಲಾಗುತ್ತಿದೆ. ಈ ಸಮಾವೇಶವನ್ನು ಮುಖ್ಯವಾಗಿ ಕೋಮುವಾದ ಹಾಗೂ ಮತೀಯವಾದವನ್ನು ಅಳಿಸಿ, ಸಂವಿಧಾನ ಸಂರಕ್ಷಣೆ ಮಾಡಿ ಪ್ರಜಾಪ್ರಭುತ್ವವನ್ನು ಬಲವರ್ಧನೆಗೊಳಿಸಬೇಕೆಂಬುದಾಗಿದೆ. ಅಲ್ಲದೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ 40 ವರ್ಷಗಳ ರಾಜಕೀಯ ಜೀವನದಲ್ಲಿ ಶೋಷಿತ ವರ್ಗಗಳ ಪರವಾಗಿ ಹೋರಾಟ ಮಾಡಿದವರಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಹಾಗೂ ಶೊಷಿತ ವರ್ಗಗಳ ಸಮುದಾಯಗಳ ಒಕ್ಕೂಟ ಸೇರಿ ಸಮಾವೇಶವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ನ ಹೋರಾಟಗಳು ಮತ್ತು ಶೋಷಿತ ವರ್ಗಗಳ ಸೈದ್ಧಾಂತಿಕ ವಿಚಾರಗಳ ಹೋಲಿಕೆಯಾಗಿರುವುದರಿಂದ ಸಮಾವೇಶವನ್ನು ನಡೆಸಬೇಕೆಂದು ತೀರ್ಮಾನಿಸಲಾಗಿದೆ. ಈ ಸಮಾವೇಶದಲ್ಲಿ ಕಾಂಗ್ರೆಸ್‌ ಸಚಿವರು, ಶಾಸಕರು ಹಾಗೂ ಕಾರ್ಯಕರ್ತರು ಸಕ್ರಿಯವಾಗಿ ಭಾಗವಹಿಸಲಿದ್ದಾರೆ ಎಂದರು.

Tags: