Mysore
19
overcast clouds
Light
Dark

ಕೋವಿಡ್‌ ಸೋಂಕಿತರಿಗೆ ಮಾರ್ಗಸೂಚಿ ಕಡ್ಡಾಯ : ದಿನೇಶ್‌ ಗುಂಡುರಾವ್‌

ಬೆಂಗಳೂರು:  ರಾಜ್ಯದಲ್ಲಿ ಕೋವಿಡ್‌ ಆತಂಕ ಇರುವ ಹಿನ್ನೆಲೆ ಹೊಸ ವರ್ಷ ಆಚರಣೆಯಲ್ಲಿ ಅಧಿಕ ಜಾಗ್ರತೆ ವಹಿಸುವಂತೆ ಈಗಾಗಲೇ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಜೊತೆಗೆ ಕೋವಿಡ್‌ ಸೋಂಕಿತ ವ್ಯಕ್ತಿಗಳಿಗೆ ಕೆಲವು ಮಾರ್ಗಸೂಚಿಗಳನ್ನು ಕಡ್ಡಾಯಗೊಳಿಸಲಾಗಿದೆ.

ಈ ಬಗ್ಗೆ ಮಾತನಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೊರೊನಾ ಸೋಂಕಿತ ವ್ಯಕ್ತಿಗಳು ಕಡ್ಡಾಯವಾಗಿ 7 ದಿನ ಹೋಂ ಐಸೊಲೇಷನ್‌ ನಲ್ಲಿ ಇರುವಂತೆ, ಹಾಗೆ ಮಾಸ್ಕ್‌ ಬಳಕೆ ಸೇರಿದಂತೆ ಕೋವಿಡ್‌ ನಿಯಮಗಳನ್ನು ಪಾಲಿಸಬೇಕು ಎಂದು ತಿಳಿಸಿದ್ದಾರೆ.

ಕೋವಿಡ್‌ ಸಂಬಂಧಿತ ಸಭೆ ಬಳಿಕ ಮಾತನಾಡಿದ ಅವರು ಹೊಸ ವರ್ಷಕ್ಕೆ ಯಾವುದೇ ನಿರ್ಬಂಧ ಇಲ್ಲ ಆದರೆ ಜನರೇ ಹೆಚ್ಚು ದಟ್ಟಣೆ ಇರುವ ಜಾಗದಲ್ಲಿ ಸೇರದೇ ಇರುವಂತೆ ಜಾಗೃತೆ ವಹಿಸಿ.

ಕೆಮ್ಮು, ಜ್ವರ, ನೆಗಡಿ ಕಾಣಿಸಿಕೊಂಡರೆ ಮಕ್ಕಳನ್ನು ಶಾಲೆಗೆ ಕಳುಹಿಸಬೇಡಿ , ಉದ್ಯೋಗಿಗಳಿಗೂ ಕಡ್ಡಾಯ ರಜೆ ನೀಡಿ ಎಂದು ಸೂಚನೆ ನೀಡಿದ್ದಾರೆ.

ಹೊರಗಡೆ ಓಡಾಡುವಾಗ ಮಾಸ್ಕ್‌ ಧರಿಸಿ, ಶುಚಿತ್ವ ಕಾಪಾಡಿಕೊಳ್ಳಿ , ರೋಗ ಲಕ್ಷಣಗಳನ್ನು ಕಡೆಗಣಿಸಬೇಡಿ. ಜೆಎನ್‌.1 ಉಪತಳಿ ರಾಜ್ಯದಲ್ಲಿ ಹರಡುವ ಆತಂಕ ಹೆಚ್ಚಿದೆ.

ಈಗಾಗಲೇ ಟೆಸ್ಟಿಂಗ್‌ ಹೆಚ್ಚಿಸಿದ್ದು 436 ಪಾಸಿಟಿವ್‌ ಪ್ರಕರಣದಗಳು ರಾಜ್ಯದಲ್ಲಿ ಇದೆ. ಹೆಚ್ಚುವರಿ ಆಕ್ಸಿಜನ್‌ ಕಂಟೈನರ್‌ , ವ್ಯಾಕ್ಸಿನ್‌ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಸಚಿವರು ಈ ವೇಳೆ ಹೇಳಿದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ