ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿರುವ ಬನ್ನೇರುಘಟ್ಟ ಜೈವಿಕ ಉದ್ಯಾನದಲ್ಲಿ ಹಾಲಿ ಇರುವ ಸಿಂಹ, ಹುಲಿ ಸಫಾರಿಯ ಜೊತೆಗೆ ಜೂನ್ ಮಾಸಾಂತ್ಯದೊಳಗೆ ಚಿರತೆ ಸಫಾರಿ ಆರಂಭಿಸಲು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ.ಖಂಡ್ರೆ ಸೂಚಿಸಿದ್ದಾರೆ.
ಇಂದು(ಜೂ.10) ವಿಕಾಸ ಸೌಧದ ಸಚಿವರ ಕಾರ್ಯಲಯದಲ್ಲಿ ನಡೆದ ಮೃಗಾಲಯ ಪ್ರಾಧಿಕಾರದ 156 ನೇ ಆಡಳಿತ ಮಂಡಳಿ ಸಭೆಯಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬನ್ನೇರುಘಟ್ಟ ಉದ್ಯಾನದಲ್ಲಿ ಒಂದು ವರ್ಷದೊಳಗಿನ ಚಿರತೆಗಳನ್ನು ಸಾಕಲಾಗಿದೆ. ದಾಖಲೆಗಳ ಪ್ರಕಾರ 70 ಚಿರತೆಗಳೂ, 19 ಹುಲಿಗಳು ಮೃಗಾಲಯದಲ್ಲಿವೆ.
ಇನ್ನೂ ಈ ಜೈವಿಕ ಉದ್ಯಾನದಲ್ಲಿ 19 ಸಿಂಹಗಳಿವೆ. ಸಿಂಹ, ಹುಲಿ ಮತ್ತು ಕರಡಿ ಹಾಗೂ ಹುಲಿಗಳನ್ನು ಸಹ ಸಾಕಲಾಗುತ್ತದೆ. ಅದರಲ್ಲೂ 7 ಬಿಳಿ ಹುಲಿಗಳಿವೆ. ಜೊತೆಗೆ 33 ಸಾಮಾನ್ಯ ಹುಲಿಗಳಿವೆ. ಸಫಾರಿ ಸಂದರ್ಭದಲ್ಲಿ ಇವುಗಳನ್ನು ಪ್ರವಾಸಿಗರ ಮುಂದೆ ಪ್ರದರ್ಶಿಸಲಾಗುತ್ತಿದೆ.