ಬೆಂಗಳೂರು: ದುಬೈನಿಂದ ಬೆಂಗಳೂರಿಗೆ ಅಕ್ರಮ ಚಿನ್ನ ಸಾಗಾಣೆ ಮಾಡಿದ ಆರೋಪದ ಹಿನ್ನೆಲೆ ಸಿನಿಮಾ ನಟಿ ರನ್ಯಾ ರಾವ್ ಅವರನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪೊಲೀಸರು ಬಂಧಿಸಿದ್ದಾರೆ.
ರನ್ಯಾ ರಾವ್ ಅವರು ದುಬೈನಿಂದ ಬೆಂಗಳೂರಿಗೆ ಸೋಮವಾರ(ಮಾರ್ಚ್.3) ರಾತ್ರಿ ಹಿಂದಿರುಗಿದ್ದರು. ಈ ವೇಳೆ ಪ್ರಯಾಣಿಕರನ್ನು ತಪಾಸಣೆ ಮಾಡುವಂತೆ ಇವರನ್ನು ತಪಾಸಣೆ ಮಾಡುವಾಗ ವಿದೇಶದಿಂದ ಹೆಚ್ಚುವರಿ ಚಿನ್ನ ತಂದಿದ್ದಾರೆ ಎಂದು ಪತ್ತೆಯಾಗಿದೆ. ಹೀಗಾಗಿ ರನ್ಯಾ ಅವರನ್ನು ಪೊಲೀಸರು ವಶಕ್ಕೆ ಪಡೆಯಲಾಗಿದೆ.
ಇನ್ನು ರನ್ಯಾ ಅವರು ವಿದೇಶದಿಂದ 14.8 ಕೆ.ಜಿ. ಚಿನ್ನವನ್ನು ಕಳ್ಳಸಾಗಣೆ ಮಾಡುತ್ತಿದ್ದ ಆರೋಪದಲ್ಲಿ DRI ಅಧಿಕಾರಿಗಳು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಈಕೆ ಐಪಿಎಸ್ ಅಧಿಕಾರಿಯ ಪುತ್ರಿಯಾಗಿದ್ದು, ಕಿಚ್ಚ ಸುದೀಪ ಹಾಗೂ ಗೋಲ್ಡನ್ ಸ್ಟಾರ್ ಗಣೇಶ್ ಅವರೊಂದಿಗೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು.
ವಿಮಾನ ನಿಲ್ದಾಣದಲ್ಲಿ ಗ್ರೀನ್‌ಫಿಲ್ಡ್ ಕಾರ್ಗೋ
ರಾಷ್ಟ್ರದಲ್ಲಿ ಹೆಚ್ಚುತ್ತಿರುವ ವಾಯುಮಾರ್ಗ ಸರಕು ಸಾಗಣೆಯ ಬೇಡಿಕೆ ಪೂರೈಸುವ ಉದ್ದೇಶದಿಂದ ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆವರಣದಲ್ಲಿ ದೇಶದಲ್ಲೇ ದೊಡ್ಡ ಗ್ರೀನ್‌ಫೀಲ್ಡ್ ದೇಶೀಯ ಕಾರ್ಗೋ ಟರ್ಮಿನಲ್ ಅನ್ನು ಆರಂಭಿಸಲಾಗಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ ಮತ್ತು ಮೆನ್ಜೀಸ್ ಏವಿಯೇಷನ್ ಸಹಯೋಗದಲ್ಲಿ ನಿರ್ಮಾಣವಾಗಿರುವ ಕಾರ್ಗೋ ಟರ್ಮಿನಲ್ 2 ಲಕ್ಷದ 45 ಸಾವಿರ ಚದರ ಅಡಿ ವಿಸ್ತೀರ್ಣ ಒಳಗೊಂಡಿದೆ. ಇದು ಕೈಗಾರಿಕೆಗಳ ಸಂಪರ್ಕ ಮತ್ತು ಪೂರೈಕೆಯನ್ನು ಬಲಪಡಿಸುವುದಲ್ಲದೇ, ದೇಶದಲ್ಲಿ ಸರಕು ಸಾಗಣೆ ಮತ್ತು ಪ್ರಾದೇಶಿಕ ವ್ಯಾಪಾರದ ಸುಸ್ಥಿರತೆ ಸಾಧಿಸುತ್ತದೆ.





