Mysore
28
light rain

Social Media

ಬುಧವಾರ, 25 ಜೂನ್ 2025
Light
Dark

ಅದೇ ಆನೆ ಕೊಡಿ, ಪಳಗಿಸಿ ಅಂಬಾರಿ ಹೊರಿಸುತ್ತೇನೆ : ಮಾವುತ ವಿನು

ಹಾಸನ: ಮಾವುತ ವಿನು, ಕುಟುಂಬದವರನ್ನು ಬಿಟ್ಟು ಆನೆಯ ಜೊತೆ ಹೆಚ್ಚಾಗಿ ಕಾಲ ಕಳೆಯುತ್ತಿದ್ದುದು. ಈಗಷ್ಟೇ ಸಾವಿನ ನೋವಿನಿಂದ ಹೊರಬರುತ್ತಿರುವ ವಿನು ಸಂದರ್ಶನವೊಂದರಲ್ಲಿ ಚಿನ್ನನೆ ಹೋದ ಮೇಲೆ ಬಹಳ ನೋವಾಯಿತು. ಆದರೀಗ ಸ್ವಲ್ಪ ಪರವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.

ಮಾವುತ ವಿನುಗೆ ಅರ್ಜುನನ್ನು ಕಳೆದುಕೊಂಡ ದುಃಖದಿಂದ ಹೊರಬರಲು ಸಾಧ್ಯವಾಗುತ್ತಿಲ್ಲ. ಅರ್ಜುನ ಆನೆಯ 11ನೇ ದಿನದ ಪುಣ್ಯಸ್ಮರಣೆ ದಿನದಂದು ಕೂಡ ವಿನು ಕಣ್ಣೀರು ಹಾಕತ್ತಲೇ ಅರ್ಜುನನ ಸಮಾಧಿ ಬಳಿ ಬಂದು ‘ಅಪ್ಪಾ ನನ್ನ ಸ್ವಾಮಿಯನ್ನು ಏಳಸಪ್ಪಾ, ಎದ್ದೇಳಸಪ್ಪಾ…’ ಎಂದು ಬೇಡಿಕೊಳ್ಳುತ್ತಿದ್ದರು.

ಹಾಗೆಯೇ ಯಾರೂ ಏನೂ ನೋವು ಮಾಡಿಕೊಳ್ಳಬೇಡಿ ಎಂದು ವಿನು ನಾಡಿನ ಜನತೆಯ ಬಳಿ ಮನವಿ ಮಾಡಿಕೊಂಡಿದ್ದಾರೆ. ಬೇಕಾದರೆ ಬಳ್ಳೆಯಲ್ಲಿ ಗೋರಿ ತರಹ ಏನಾದರೂ ಮಾಡೋಣ ಎಲ್ಲರೂ ಬಂದು ಅದರ ಆಶೀರ್ವಾದ ಪಡೆದುಹೋಗಿ ಎಂದಿದ್ದಾರೆ.

ನಾಡಿನ ಜನತೆಗೆ ಕಾಡುತ್ತಿರುವ ಪ್ರಶ್ನೆಯೆಂದರೆ ವಿನು ಅವರು ಮಂದೆ ಏನು ಮಾಡುತ್ತಾರೆ? ಅಂತ. ಅವರ ತಂದೆ ಜಮೀನ್ದಾರ ಆಗು ಅಂತ ಮೊದಲಿನಿಂದಲೂ ಹೇಳುತ್ತಿದ್ದಾರೆ. ಆದರೆ ವಿನು ಅವರು ಮಾತ್ರ ಅರ್ಜುನನನ್ನು ಕೊಂದ ಅದೇ ಆನೆ ಕೊಡಿ ಎಂದು ಕೇಳುತ್ತಿದ್ದಾರೆ.

ಹೌದು, ವಿನು ಅದನ್ನು ಪಳಗಿಸಿ ದಸರಾಗೆ ತರುವ ವ್ಯವಸ್ಥೆ ಮಾಡುತ್ತೇನೆ. ದಸರಾಗೆ ಬಂದು ಅದು ಕೂಡ ಅಂಬಾರಿ ಹೊರಬೇಕು. ಆ ತರಹ ವ್ಯವಸ್ಥೆ ಮಾಡುತ್ತೇನೆ. ಕಣ್ಣ ಮುಂದೆಯೇ ಹೊಡೆದಾಡಿದ್ದು ಕಣ್ಣಿಗೆ ಕಟ್ಟಿದಂತಿದೆ. ನನಗೆ ಅದೇ ಆನೆ ಬೇಕು. ನಾನು ಅದನ್ನು ನೋಡಿದ್ದೇನೆ ಎಂದು ತಿಳಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!