Mysore
17
clear sky

Social Media

ಗುರುವಾರ, 22 ಜನವರಿ 2026
Light
Dark

ಬಿಎಂಟಿಸಿ ಬಸ್‌ ಹರಿದು ಬಾಲಕಿ ದುರ್ಮರಣ

bus accident (1)

ಬೆಂಗಳೂರು: ಬೈಕ್‌ ಸ್ಕಿಡ್‌ ಆಗಿ ಕೆಳಗೆ ಬಿದ್ದ ಬಾಲಕಿ ಮೇಲೆಯೇ ಬಿಎಂಟಿಸಿ ಬಸ್‌ ಹರಿದು ಹೋದ ಪರಿಣಾಮ ಬಾಲಕಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಯಲಹಂಕದ ಕೋಗಿಲು ಕ್ರಾಸ್‌ ಬಳಿಯ ಮಾರುತಿ ನಗರದಲ್ಲಿ ಈ ಘಟನೆ ನಡೆದಿದ್ದು, 10 ವರ್ಷದ ಬಾಲಕಿ ತನ್ವಿಕೃಷ್ಣ ಎಂಬಾಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

ತನ್ವಿಕೃಷ್ಣ ಖಾಸಗಿ ಶಾಲೆಯಲ್ಲಿ 7ನೇ ತರಗತಿ ಓದುತ್ತಿದ್ದಳು. ಬೈಕ್‌ ಸ್ಕಿಡ್‌ ಆಗಿ ಬಾಲಕಿ ತನ್ವಿಕೃಷ್ಣ ಕೆಳಗೆ ಬಿದ್ದಿದ್ದಾಳೆ. ಈ ವೇಳೆ ಬಾಲಕಿ ಮೇಲೆಯೇ ಬಿಎಂಟಿಸಿ ಬಸ್‌ ಹರಿದ ಪರಿಣಾಮ ಬಸ್‌ ಚಕ್ರಕ್ಕೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾಳೆ.

Tags:
error: Content is protected !!