ಕೊಪ್ಪಳ: ಮೇಘಾಲಯದ ರಾಜ್ಯಪಾಲ ಸಿ.ಎಚ್.ವಿಜಯ್ ಶಂಕರ್ ಅವರು ಗವಿಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ, ಇಲ್ಲಿನ ಸ್ವಾಮೀಜಿಗೆ ರೇಷ್ಮೆ ಶಾಲನ್ನು ಉಡುಗೊರೆಯಾಗಿ ನೀಡಿದ್ದಾರೆ.
ಕೊಪ್ಪಳ ಜಿಲ್ಲೆಯ ಗವಿಸಿದ್ದೇಶ್ವರ ಮಠಕ್ಕೆ ಇಂದು(ಫೆಬ್ರವರಿ.22) ಭೇಟಿ ನೀಡಿದ ಅವರು, ಗದ್ದುಗೆಯ ದರ್ಶನ ಪಡೆದು ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಆರ್ಶೀವಾದ ಪಡೆದಿದ್ದಾರೆ. ಬಳಿಕ ಮೇಘಾಲಯ ರಾಜಭವನದ ಸಂಕೇತ ಇಉವ ಉಡುಗೊರೆ ಮತ್ತು ರೇಷ್ಮೆ ಶಾಲನ್ನು ಸ್ವಾಮೀಜಿಗೆ ಉಡುಗೊರೆಯಾಗಿ ನೀಡಿದ್ದಾರೆ.
ಸ್ವಾಮೀಜಿ ಅವರು ಅದಕ್ಕೆ ಪ್ರತಿಯಾಗಿ ಮಠದ ಗದ್ದುಗೆಯ ಭಾವಚಿತ್ರ ನೀಡಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಮೇಘಾಲಯದ ವಾತಾವರಣ, ಬೆಳವಣಿಗೆಗಳು ಹಾಗೂ ಅಲ್ಲಿನ ಸ್ಥಿತಿಗತಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ರಾಜ್ಯಪಾಲರಿಂದ ಮಾಹಿತಿ ಪಡೆದುಕೊಂಡಿದ್ದಾರೆ.





