ಬೆಂಗಳೂರು: ಜನಿವಾರ ತೆಗೆಸಿ ಪರೀಕ್ಷೆ ಬರೆಸಿರುವುದು ದೊಡ್ಡ ತಪ್ಪು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ.
ಈ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾವು ಪರೀಕ್ಷೆ ಮಾಡುವ ಸಂದರ್ಭದಲ್ಲಿ ನಿಯಮ ಪಾಲನೆ ಮಾಡಲು ಹೇಳುತ್ತಾರೆ. ಈ ತರಹ ಪಾಲನೆ ಮಾಡಲು ಹೇಳಿರಲ್ಲ. ಅಧಿಕಾರಿಗಳು ಎಲ್ಲವನ್ನೂ ಸರಪಡಿಸುತ್ತಾರೆ ಎಂದು ಭರವಸೆಯ ಮಾತುಗಳನ್ನಾಡಿದರು.
ಇದನ್ನೂ ಓದಿ:- ಎಲ್ಲರ ಅಭಿಪ್ರಾಯದ ಬಳಿಕ ಜಾತಿಗಣತಿ ಬಗ್ಗೆ ಮುಂದಿನ ನಿರ್ಧಾರ: ಸಚಿವ ಪರಮೇಶ್ವರ್
ಇನ್ನು ರಿಕ್ಕಿ ರೈ ಮೇಲೆ ಗುಂಡಿನ ದಾಳಿ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ನನಗೆ ವಿಷಯ ಗೊತ್ತಾಗಿದೆ. ರಾತ್ರಿ 1 ಗಂಟೆಗೆ ಘಟನೆ ನಡೆದಿದೆ. ಘಟನೆ ಬಗ್ಗೆ ಮಾಹಿತಿ ಕೇಳಿದ್ದು, ಔಟ್ ಆಫ್ ಡೇಂಜರ್ ಎಂದು ಹೇಳಿದ್ದಾರೆ. ಪ್ರಕರಣ ಸಂಬಂಧ ತನಿಖೆ ನಡೆಯುತ್ತಿದೆ ಎಂದರು.
ಇನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಕಾನೂನು ಸುವ್ಯವಸ್ಥೆ ಸರಿಯಾಗಿದೆ ಎಂದು ವಿಪಕ್ಷಗಳ ಆರೋಪಕ್ಕೆ ತಿರುಗೇಟು ನೀಡಿದರು.





