Mysore
17
scattered clouds

Social Media

ಸೋಮವಾರ, 02 ಫೆಬ್ರವರಿ 2026
Light
Dark

ಇನ್ಮುಂದೆ ಎಸ್‌ಎಸ್‌ಎಲ್‌ಸಿ ಯಲ್ಲಿ ಶೇ.33 ಅಂಕ ಬಂದ್ರೂ ಪಾಸ್‌

From Now On Scoring 33% Marks in SSLC Will Be Considered as Pass

ಬೆಂಗಳೂರು : ಸಿಬಿಎಸ್‌ಇ ಮಾದರಿಯಲ್ಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಲು ಶಿಕ್ಷಣ ಇಲಾಖೆ ಮುಂದಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತೀರ್ಣ ಅಂಕವನ್ನು ಕಡಿತಗೊಳಿಸಲಾಗಿದೆ.

ಪರೀಕ್ಷಾ ಸುಧಾರಣೆಗೆ ಮುಂದಾಗಿರುವ ಶಿಕ್ಷಣ ಇಲಾಖೆ ಈ ನಿಯಮವನ್ನು ಜಾರಿಗೆ ತಂದಿದೆ. ಇನ್ಮುಂದೆ ಎಸ್​ಎಸ್​ಎಲ್​ಸಿ ಪರೀಕ್ಷೆಯಲ್ಲಿ ಲಿಖಿತ ಪರೀಕ್ಷೆ ಹಾಗೂ ಆಂತರಿಕ ಅಂಕಗಳೂ ಸೇರಿ 100ಕ್ಕೆ ಕನಿಷ್ಠ ಶೇ.33 ಅಂಕ ಪಡೆದರೂ ಉತ್ತೀರ್ಣರಾಗಲಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರ ಅಧಿಕೃತ ಅಧಿಸೂಚನೆ ಹೊರಡಿಸಿದೆ.

ಈ ಹಿಂದೆ ಒಟ್ಟಾರೆ ಉತ್ತೀರ್ಣ ಶೇ. 35 ಇತ್ತು. ಪ್ರತಿ ವಿಷಯದಲ್ಲಿ 35 ಅಂಕ ಪಡೆಯಬೇಕಿತ್ತು. ಈಗ ಪ್ರತಿ ವಿಷಯದಲ್ಲಿ 30 ಅಂಕ ಪಡೆದರೆ ಉತ್ತೀರ್ಣ. ಅಂದರೆ ಪಾಸಿಂಗ್ ಅಗ್ರಿಗೇಟ್ 33% ಬರಬೇಕು. ಸಿಬಿಎಸ್ಇ ಮಾಡಲ್ ನಲ್ಲಿ ಇದೇ ಮಾದರಿ ಇದೆ. ಓವರ್‌ಆಲ್‌ ಅಗ್ರಿಗೇಟ್‌ ಪಾಸಿಂಗ್ ಮಾರ್ಕ್ಸ್‌ ಶೇಕಡಾ 33ಕ್ಕೆ ಕಡಿತ ಮಾಡಲಾಗಿದ್ದು, ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 625ಕ್ಕೆ 206 ಅಂಕ ಪಡೆದರೆ ಉತ್ತೀರ್ಣರಾಗಲಿದ್ದಾರೆ. ಇನ್ನು ಈ ಬಗ್ಗೆ ಸರ್ಕಾರ, ಸಾರ್ವಜನಿಕರ ಅಕ್ಷಪಣೆ ಪಡೆಯಲು ಮುಂದಾಗಿದ್ದು, ಜನರ ಅಭಿಪ್ರಾಯ ತಿಳಿಸಲು 15 ದಿನ ಕಾಲಾವಕಾಶ ನೀಡಲಾಗಿದೆ.

Tags:
error: Content is protected !!