Mysore
36
few clouds

Social Media

ಭಾನುವಾರ, 26 ಏಪ್ರಿಲ 2026
Light
Dark

ಮಾಜಿ ಮುಡಾ ಆಯುಕ್ತ ಹಾವೇರಿ ವಿವಿ ಕುಲಸಚಿವರಾಗಿ ನೇಮಕ

ಮೈಸೂರು: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಮಾಜಿ ಆಯುಕ್ತನಿಗೆ ರಾಜ್ಯ ಸರ್ಕಾರ ಭರ್ಜರಿ ಗಿಫ್ಟ್‌ ನೀಡಿದ್ದು, ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್‌ ಅಧಿಕಾರಿ ಜಿ.ಟಿ ದಿನೇಶ್‌ ಕುಮಾರ್‌ ಅವರನ್ನು ನೇಮಕ ಮಾಡಲಾಗಿದೆ.

50:50ಅನುಮಾತದಡಿ ಮುಡಾದಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರದಲ್ಲಿ ಕೆಎಎಸ್‌ ಅಧಿಕಾರಿ ಜಿ.ಟಿ ದಿನೇಶ್‌ ಕುಮಾರ್‌ ಅವರ ಮೇಲೆ ಗಂಭೀರ ಆರೋಪ ಕೇಳಿ ಬಂದಿತ್ತು. ಈ ಆರೋಪ ಕೇಳಿ ಬಂದ ತಕ್ಷಣ ನಗರಾಭಿವೃದ್ದಿ ಸಚಿವೆ ಭೈರತಿ ಸುರೇಶ್‌ ಮೈಸೂರಿಗೆ ಆಗಮಿಸಿ ಸಭೆಯನ್ನು ಸಹ ನಡೆಸಿದ್ದರು. ಇನ್ನು ಮುಡಾ ಅಧಿಕಾರಿಯಾಗಿದ್ದ ದಿನೇಶ್‌ ಕುಮಾರ್‌ ಅವರನ್ನು ಯಾವುದೇ ಸ್ಥಳ ತೋರಿಸದೇ ವರ್ಗಾವಣೆ ಮಾಡಲಾಗಿತ್ತು.

ಯಾವುದೇ ಸ್ಥಳ ನಿಯೋಜನೆ ಮಾಡಿದ ವರ್ಗಾವಣೆಯಾಗಿದ್ದ ಕೆಎಎಸ್‌ ಅಧಿಕಾರಿ ಜಿ.ಟಿ ದಿನೇಶ್‌ ಕುಮಾರ್‌ ಅವರನ್ನು ಇದೀಗ ಹಾವೇರಿ ವಿಶ್ವವಿದ್ಯಾಲಯದ ಕುಲಸಚಿವರಾಗಿ ನೇಮಕ ಮಾಡಲಾಗಿದೆ. ಈ ನೇಮಕ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ.

Tags:
error: Content is protected !!