ಹನೂರು : ಜನ ಜಾನುವಾರುಗಳಿಗೂ ಕುಡಿಯುವ ನೀರಿನ ತೊಂದರೆ ಉಂಟಾಗಿರುವ ಪರಿಣಾಮ ಗ್ರಾಮದಲ್ಲಿರುವ ಮಕ್ಕಳೆಲ್ಲರೂ ಸೇರಿ ಮಳೆರಾಯನಿಗೆ ಪ್ರಾರ್ಥನೆ ಮಾಡಿರುವಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಲೂಕಿನ ಕೆಂಪಯ್ಯನ ಹಟ್ಟಿ ಗ್ರಾಮದ ಮಕ್ಕಳು ಮತ್ತು ಗ್ರಾಮಸ್ಥರು ಸೇರಿ ಕಪ್ಪೆಗೆ ಪೂಜೆ ಮಾಡಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಮಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.
ಕಪ್ಪೆಯನ್ನು ಹಿಡಿದು ಬೇವಿನ ಸೊಪ್ಪಿನ ಜೊತೆಗೆ ಹಾಕುವ ಮೂಲಕ ಅರಿಶಿನ ಕುಂಕುಮ ಹಾಕಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಉಯೋ ಉಯೋ ಮಳೆರಾಯ ಎಂಬ ಘೋಷಣೆಗಳನ್ನು ಕೂಗುತ್ತ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡುವ ಮೂಲಕ ಮಳೆಗಾಗಿ ವಿಶೇಷ ರೀತಿಯಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ ಮಕ್ಕಳು. ಈ ಮಕ್ಕಳ ಪದ್ಧತಿಗೆ ಅನುಗುಣವಾಗಿ ಗ್ರಾಮಸ್ಥರು ಸಹ ಸಾಥ್ ನೀಡಿರುವುದು ಮಕ್ಕಳಿಗೆ ಅನುಕೂಲವಾಗಿದೆ.
ಜನ ಜಾನುವಾರುಗಳಿಗೂ ಸಂಕಟ
ಬಿರು ಬೇಸಿಗೆ ಪ್ರಾರಂಭವಾದ ದಿನಗಳಿಂದ ಕುಡಿಯುವ ನೀರಿಗಾಗಿ ಪರಿತಪಿಸುತ್ತಿರುವ ದಿನಮಾನಗಳಲ್ಲಿ ಗ್ರಾಮದಲ್ಲಿ ಜನರಿಗೆ ಮತ್ತು ಜಾನುವಾರುಗಳಿಗೂ ಸಹ ಕುಡಿಯುವ ನೀರಿನ ಅಭಾವ ಎದುರಾಗಿದೆ. ಹಾಗಾಗಿ ಮಳೆ ಬರುವಂತೆ ಮಾಡಲು ಹಿಂದಿನ ಪದ್ಧತಿಯಂತೆ ಮಕ್ಕಳು ಸಾಂಪ್ರದಾಯಿಕವಾಗಿ ಪೂಜೆ ಪುರಸ್ಕಾರ ನಡೆಸಿದ್ದಾರೆ.
ಮುಖ್ಯ ಮಂತ್ರಿಗಳಿಗೆ ಪತ್ರ
ಈ ಹಿಂದೆ ವರ್ಣಿಕಾ ಎಂಬ ಇದೆ ಗ್ರಾಮದ ವಿದ್ಯಾರ್ಥಿನಿ ಗ್ರಾಮದಲ್ಲಿ ಕುಡಿಯುವ ನೀರಿನ ಅಭಾವ ಎದುರಾಗಿದೆ ಎಂಬ ವಿಷಯವನ್ನು ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಎಲ್ಲರ ಗಮನವನ್ನು ಸೆಳೆದಿದ್ದಳು. ಅಂತೇಯೇ ಮನೆ
ಮುಖ್ಯಮಂತ್ರಿ ಅವರು ಉಡುತೊರೆ ಹಳ್ಳ ಜಲಾಶಯಕ್ಕೆ ನದಿ ಮೂಲದಿಂದ ನೀರು ತುಂಬಿಸಲು 490 ಕೋಟಿ ರೂ ವೆಚ್ಚದಲ್ಲಿ ಬಜೆಟ್ ನಲ್ಲಿ ಅನುದಾನವನ್ನು ಮೀಸಲಿಟ್ಟಿದ್ದರು.





