Mysore
27
mist

Social Media

ಗುರುವಾರ, 07 ನವೆಂಬರ್ 2024
Light
Dark

ಹಾಸ್ಯ ನಟ ಹುಲಿ ಕಾರ್ತಿಕ್‌ ವಿರುದ್ಧ ಎಫ್‌ಐಆರ್‌ ದಾಖಲು

ಬೆಂಗಳೂರು: ಹಾಸ್ಯನಟ ಹುಲಿ ಕಾರ್ತಿಕ್‌ ಅವರ ವಿರುದ್ಧ ಜಾತಿ ನಿಂದಿಸಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ಬೆಂಗಳೂರಿನ ಅನ್ನಪೂರ್ಣೇಶ್ವರಿ ನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಖಾಸಗಿ ವಾಹಿನಿಯಲ್ಲಿ ಇತ್ತೀಚೆಗೆ ಪ್ರಸಾರವಾದ ಕಾರ್ಯಕ್ರಮವೊಂದರಲ್ಲಿ ಹುಲಿ ಕಾರ್ತಿಕ್‌ ಅವರು ಮಾಡಿದ ಪದ ಬಳಕೆಯೂ ಬೋವಿ ಜನಾಂಗಕ್ಕೆ ನೋವುಂಟು ಮಾಡಿದ್ದು, ಜಾತಿ ನಿಂದಿಸಿ ಮಾತನಾಡಿದ್ದಾರೆ ಎಂಬ ಆರೋಪದ ಮೇಲೆ ನಟನ ವಿರುದ್ಧ ಕ್ರಮ ಕೈಗೊಳ್ಳಲು ದೂರು ನೀಡಲಾಗಿದೆ. ಕಾರ್ಯಕ್ರಮದ ಸಂಭಾಷಣೆಕಾರ, ನಿರ್ದೇಶಕ ಹಾಗೂ ನಿರ್ಮಾಪಕನ ಮೇಲೂ ಎಫಐಆರ್‌ ದಾಖಲಾಗಿದೆ.

ಹುಲಿ ಕಾರ್ತಿಕ್‌ ಅವರು ಒಂದು ಸಮುದಾಯವನ್ನು ಹೀಗಳೆಯುವ ರೀತಿಯಲ್ಲಿ ಮಾತನಾಡಿದ್ದು, ಒಂದು ನಿರ್ದಿಷ್ಟ ಸಮುದಾಯದ ಹೆಸರನ್ನು ನಕರಾತ್ಮಕವಾಗಿ ಬಳಸಿದ್ದರು ಎಂದು ಎಂಬ ಕಾರಣವಾಗಿ ದೂರು ದಾಖಲಿಸಿದ್ದಾರೆ ಎಂದು ಹೇಳಲಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾತಿ ನಿಂದನೆ ಆರೋಪದ ಅಡಿಯಲ್ಲಿ ಎ1 ಹುಲಿ ಕಾರ್ತಿಕ್‌, ಎ2 ಸ್ಕ್ರಿಪ್ಟ್‌ ರೈಟರ್‌, ಎ3 ನಿರ್ದೇಶಕರು ಹಾಗೂ ಎ4 ನಿರ್ಮಾಪಕರು ಪ್ರಮುಖ ಆರೋಪಿಗಳಾಗಿದ್ದಾರೆ.

Tags: