Mysore
25
haze

Social Media

ಶುಕ್ರವಾರ, 12 ಡಿಸೆಂಬರ್ 2025
Light
Dark

ಹೊಸ ವರ್ಷಾಚರಣೆಯಿಂದ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ

ಬೆಂಗಳೂರು: ಹೊಸ ವರ್ಷಕ್ಕೆ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಬಂದಿದ್ದು, ನಿನ್ನೆ ಒಂದೇ ದಿನ ರಾಜ್ಯದಲ್ಲಿ 308 ಕೋಟಿ ಮದ್ಯ ಮಾರಾಟವಾಗಿದೆ.

ಡಿಸೆಂಬರ್.‌31ರ ಮಂಗಳವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಕೇವಲ ಅರ್ಧ ದಿನದ ಅವಧಿಯಲ್ಲಿ ಬರೋಬ್ಬರಿ 308 ಕೋಟಿ ರೂ ಮದ್ಯ ಮಾರಾಟವಾಗಿದೆ. ಈ ಮೂಲಕ ಅಬಕಾರಿ ಇಲಾಖೆಗೆ ಭರ್ಜರಿ ಆದಾಯ ಹರಿದು ಬಂದಿದೆ. 2024ರ ಡಿಸೆಂಬರ್.‌31ರಂದು 7305 ಮದ್ಯ ಮಾರಾಟಗಾರರು ಕೆಎಸ್‌ಬಿಸಿಎಲ್‌ ನಿಂದ ಮದ್ಯ ಖರೀದಿ ಮಾಡಿದ್ದಾರೆ.

ಇನ್ನು ಕಳೆದ 2023ರ ಡಿಸೆಂಬರ್.‌31ರಂದು 193 ಕೋಟಿ ಮದ್ಯ ಮಾರಾಟ ಆಗಿತ್ತು. ನಿನ್ನೆ ರಾಜ್ಯದಲ್ಲಿ ಭರ್ಜರಿ 308 ಕೋಟಿ ಮದ್ಯ ಮಾರಾಟವಾಗಿದೆ.

ಕರ್ನಾಟಕ ರಾಜ್ಯ ಸೇರಿದಂತೆ ದೇಶಾದ್ಯಂತ ಹೊಸ ವರ್ಷದ ಸಂಭ್ರಮಾಚರಣೆ ಮುಗಿಲುಮುಟ್ಟಿದೆ. 2024ಕ್ಕೆ ಗುಡ್‌ಬೈ ಹೇಳಿ 2025ನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಗಿದೆ. ಎಲ್ಲೆಲ್ಲೂ ಯುವಕರು ಸೇರಿದಂತೆ ಎಲ್ಲಾ ವರ್ಗದ ಜನರು ಸಂಭ್ರಮಾಚರಣೆ ನಡೆಸಿದ್ದಾರೆ. ಬೆಂಗಳೂರಿನ ಪ್ರಮುಖ ರಸ್ತೆಗಳು ಯುವಕ ಯುವತಿಯರು ಮದ್ಯದ ಅಮಲಿಯಲ್ಲಿ ತೂರಾಡುತ್ತಿದ್ದರು. ಕೆಲವರಂತೂ ಕುಡಿದು ರಸ್ತೆಯಲ್ಲೇ ಟೈಟಾಗಿ ಬಿದ್ದಿದ್ದರು.

ಮಧ್ಯರಾತ್ರಿ 12 ಗಂಟೆಯಿಂದ ಬೆಳಿಗ್ಗೆಯವರೆಗೂ ಪ್ರಮುಖ ರಸ್ತೆಗಳು ಹಾಗೂ ಮನೆಗಳಲ್ಲೂ ಹೊಸ ವರ್ಷದ ಸಂಭ್ರಮ ಆಚರಿಸಿದ ಜನರು, ನೂತನ ವರ್ಷವನ್ನು ಅದ್ಧೂರಿಯಿಂದ ಬರಮಾಡಿಕೊಂಡಿದ್ದಾರೆ.

 

Tags:
error: Content is protected !!