Mysore
27
clear sky

Social Media

ಭಾನುವಾರ, 18 ಜನವರಿ 2026
Light
Dark

ಲಕ್ಕುಂಡಿಯಲ್ಲಿ ಮುಂದುವರಿದ ಉತ್ಖನನ ಕಾರ್ಯ: ಬೃಹತ್‌ ಶಿವಲಿಂಗ ಪತ್ತೆ

ಗದಗ: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಜಿಲ್ಲಾಡಳಿತದ ವತಿಯಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು, ಇಂದು ಮೂರನೇ ದಿನಕ್ಕೆ ಕಾಲಿಟ್ಟಿದೆ.

ಕೋಟಿ ವೀರಭದ್ರೇಶ್ವರ ದೇವಸ್ಥಾನದ ಮುಂಭಾಗದಿಂದ ಉತ್ಖನನ ಕಾರ್ಯ ನಡೆಯುತ್ತಿದ್ದು, ಸ್ಥಳದಲ್ಲಿ ಬೃಹತ್‌ ಶಿವಲಿಂಗವೊಂದು ಪತ್ತೆಯಾಗಿದೆ ಎಂದು ತಿಳಿದುಬಂದಿದೆ.

ಇನ್ನು ವಿಶೇಷವೆಂದರೆ ಮೂರನೇ ದಿನದ ಉತ್ಖನನ ಕಾರ್ಯ ನಡೆಸುತ್ತಿದ್ದ ವೇಳೆ ಸ್ಥಳದಲ್ಲಿ ಬೃಹತ್‌ ಹಾವು ಪ್ರತ್ಯಕ್ಷವಾಗಿದೆ. ಇದು ಉತ್ಖನನ ನಡೆಸುತ್ತಿದ್ದ ಕಾರ್ಮಿಕರಿಗೆ ಆತಂಕವನ್ನುಂಟು ಮಾಡಿದೆ.

ನಿಧಿಗಳನ್ನು ಹಾವುಗಳು ಕಾಯುತ್ತಿರುತ್ತವೆ ಎಂಬ ಹೇಳಿಕೆಯಿದೆ. ಅದೇ ರೀತಿ ಕಾಕತಾಳಿಯ ಎಂಬಂತೆ ಉತ್ಖನನ ಪರಿಶೀಲನೆ ವೇಳೆ ಸ್ಥಳದಲ್ಲಿ ಹಾವು ಕಾಣಿಸಿಕೊಂಡಿದ್ದು, ಕೆಲಸಗಾರರಲ್ಲಿ ಆತಂಕ ಸೃಷ್ಟಿಸಿದೆ.

Tags:
error: Content is protected !!